ಬಸ್ ಮಾಲೀಕರ ಲಾಬಿಗೆ ತಾಳತಪ್ಪುತ್ತಿರುವ ತಾಳಗುಪ್ಪ ರೈಲು

Bangalore-Talguppa train service delay
ಬೆಂಗಳೂರು, ಜುಲೈ 6: ಶಿವಮೊಗ್ಗ-ಆನಂದಪುರ ರೈಲು ಪ್ರಾರಂಭವಾಗಿ ತಿಂಗಳುಗಳೇ ಕಳೆದಿವೆ. ಆನಂದಪುರ-ತಾಳಗುಪ್ಪ ರೈಲು ಹಳಿ ಕೆಲಸ ಪೂರ್ಣಗೊಂಡು ಸಂಚಾರಕ್ಕೆ ಸಿದ್ಧವಾಗಿದೆ ಎಂಬ ವರದಿ ಮೂರು ತಿಂಗಳ ಹಿಂದೆಯೇ ಬಂದಿದೆ. ಇನ್ನು, ರೈಲು ಹಳಿಯ ಸುರಕ್ಷತೆ ಪರೀಕ್ಷಿಸಲು ಮೂರು ತಿಂಗಳ ಹಿಂದೆ 120 ಕಿ.ಮಿ. ವೇಗದಲ್ಲಿ ರೈಲು ಓಡಿಸಿದ ರೈಲ್ವೇ ಇಲಾಖೆ ಸಂಚಾರಕ್ಕೆ ಸಿದ್ಧವಾಗಿದೆ ಎಂಬ ಹೇಳಿಕೆ ನೀಡಿತ್ತು.

ಇಷ್ಟಾದ ಮೇಲೂ ತಾಳಗುಪ್ಪಕ್ಕೆ ರೈಲು ಸಂಚಾರ ಪ್ರಾರಂಭಿಸುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಕೆಲವು ದಿನಗಳ ಹಿಂದಷ್ಟೆ ಮೈಸೂರು-ತಾಳಗುಪ್ಪ ರೈಲು ಹಗಲು ವೇಳೆ ಸಂಚರಿಸುವ ವೇಳಾಪಟ್ಟಿ ಪ್ರಕಟವಾಯಿತು.ಆದರೆ ಆ ಪ್ರಕಟಣೆಯಲ್ಲೇ ಆ ರೈಲು ಪ್ರಾರಂಭವಾಗುವ ದಿನಗಳನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರು-ಸಾಗರ ಮತ್ತು ತಾಳಗುಪ್ಪ ಮಧ್ಯೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿಗೆ ಪ್ರತಿದಿನ ಏಳೆಂಟು ಬಸ್ಸುಗಳು ಸಂಚರಿಸುತ್ತಿವೆ. ಆದರೆ ಮೇಲಿನ ಪ್ರಕಟಣೆಯಲ್ಲಿ ಬೆಂಗಳೂರು ಮತ್ತು ತಾಳಗುಪ್ಪ ನಡುವೆ ರೈಲು ಓಡಿಸುವ ಯಾವ ಪ್ರಸ್ತಾಪಗಳು ಇಲ್ಲದಿರುವುದು ಸಾಗರದ ಜನರಿಗೆ ನಿರಾಸೆ ಉಂಟುಮಾಡಿದೆ.

ಈ ವಿಳಂಬಕ್ಕೆ ಬಸ್ಸುಗಳ ಮಾಲೀಕರ ಲಾಬಿಯಿಂಗ್ ಕಾರಣ ಎಂಬ ಅನುಮಾನ ಅಲ್ಲಿಯ ಜನರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಈ ಅನುಮಾನವನ್ನು ಸುಳ್ಳಾಗಿಸಲು ರೈಲ್ವೇ ಇಲಾಖೆಯವರು ಬೆಂಗಳೂರು-ತಾಳಗುಪ್ಪ ನಡುವೆ ರೈಲನ್ನು ಕೂಡಲೇ ಪ್ರಾರಂಭಿಸುತ್ತಾರೆಂದು ಆಶಿಸೋಣವೇ? ಹಾಗೆಯೇ ತಾಳಗುಪ್ಪ ಹೊನ್ನಾವರ ನಡುವೆ ರೈಲು ದಾರಿ ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ರೈಲ್ವೇ ಇಲಾಖೆ ಕೈಗೊಳ್ಳುತ್ತದೆಂದು ನಿರೀಕ್ಷಿಸಬಹುದೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+