ಕಾರ್ಕಳ ಕಸಾಯಿಖಾನೆಗೆ ಗೋ ಸಾಗಾಟ ಪತ್ತೆ
ಕಾರ್ಕಳ
(ಉಡುಪಿ ಜಿಲ್ಲೆ), ಜುಲೈ 5: ಶನಿವಾರ ರಾತ್ರಿ ವೇಳೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ಗೋಸಾಗಾಟ ಪ್ರಕರಣ ಪತ್ತೆಯಾಗಿದೆ. ಆರೋಪಿಗಳು ಟೆಂಪೋವನ್ನು ಬಿಟ್ಟು ಪರಾರಿಯಾಗಿದ್ದು ಅದರಲ್ಲಿ 9 ಜಾನುವಾರುಗಳನ್ನು ಅಮಾನವೀಯ ರೀತಿಯಲ್ಲಿ ಕಟ್ಟಿಹಾಕಿ, ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿತ್ತೆಂದು ತಿಳಿದುಬಂದಿದೆ. id="toptextpromo">ಗ್ರಾಮ
ಪಂಚಾಯಿತಿಯ ಮಾಜಿ ಸದಸ್ಯ ದಿನೇಶ್ ಪೂಜಾರಿ ಎಂಬಾತ ಈ ಜಾನುವಾರುಗಳನ್ನು ಪರಾರಿಯಾದ ಆರೋಪಿಗಳಿಗೆ ಮಾರಾಟ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್ ಮತ್ತು ಕ್ರೈಂ ವಿಭಾಗದ ಎಸೈ ರವಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜೇಶ್, ಸುರೇಶ್ ಶೆಟ್ಟಿ, ಸುರೇಂದ್ರ, ರಾಘವೇಂದ್ರ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. id='are-slot-1' class='oiad oi-axt oiadv'> id='top-searched-articles'>ಕೆಎ-19
ಎ 6151 ನೋಂದಣಿ ಸಂಖ್ಯೆಯ ಗೂಡ್ಸ್ ಟೆಂಪೊ ಅತೀ ವೇಗವಾಗಿ ಬರುತ್ತಿರುವುದನ್ನು ಕಂಡು ರಾತ್ರಿ ಗಸ್ತುವಿನಲ್ಲಿದ್ದ ಪೊಲೀಸರು ಅದನ್ನು ನಿಲ್ಲಿಸುವಂತೆ ಸೂಚಿಸಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನದ ಮಾಲಕ ಪಡುಬಿದ್ರಿಯ ಸುಲೈಮಾನ್ ಎಂದು ತಿಳಿದುಬಂದಿದೆ.











Click it and Unblock the Notifications