ಕೊನೆಗೂ ಕೋರ್ಟಿಗೆ ಹಾಜರಾದ ಜನಾರ್ದನ ರೆಡ್ಡಿ

Janardhana Reddy appears before court
ಬಳ್ಳಾರಿ, ಜು. 5 : ಸೈಯದ್ ಮುಜೀಬ್ ಕೊಲೆ ಪ್ರಕರಣದಲ್ಲಿ ಓರ್ವ ಕಾರ್ಪೊರೇಟರ್ ಮನೆ ಮತ್ತು ಆಸ್ತಿಯ ಮೇಲೆ ದಾಳಿ ನಡೆಸಿದ ಆರೋಪ ಹೊತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ ಮತ್ತಿತರ 9 ಜನ ಜನರು 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸೋಮವಾರ ಹಾಜರಾಗಿ ಜಾಮೀನು ಪಡೆದರು. 28 ಬಾರಿ ವಾರಂಟ್ ಜಾರಿಯಾಗಿದ್ದರೂ ಅದನ್ನು ರೆಡ್ಡಿ ಬಳಗ ಸ್ವೀಕರಿಸಿರಲಿಲ್ಲ.

ಏಪ್ರಿಲ್ 2, 2002ರಂದು ಸೈಯದ್ ಮುಜೀಬ್‌ನ ಕೊಲೆ ನಡೆದಿತ್ತು. ಈ ಕೊಲೆಗೆ ಜೆಡಿಎಸ್‌ನ ಕಾರ್ಪೊರೇಟರ್ ಇಸ್ಮಾಯಿಲ್‌ನೇ ಕಾರಣ ಎಂದು ಸಚಿವ ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ಕೌಲ್‌ಬಜಾರ್ ಪೊಲೀಸ್ ಠಾಣೆಯ ಮುಂದೆ ಶವವನ್ನು ಇರಿಸಿ ಪ್ರತಿಭಟನೆ ನಡೆಸಲಾಗಿತ್ತು. ನಂತರ ಬಿಜೆಪಿಯ ಕಾರ್ಯಕರ್ತರು, ಬೆಂಬಲಿಗರು ಅನೇಕರು ಇಸ್ಮಾಯಿಲ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ ಅವರ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದರು.

ಈ ಕುರಿತು ಇಸ್ಮಾಯಿಲ್ ಅವರು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ 32 ಜನರ ಮೇಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ಕುರಿತು 28 ಬಾರಿ ಜಾಮೀನು ರಹಿತ ಬಂಧನದ ವಾರಂಟ್ ಜಾರಿಯಾಗಿತ್ತು. ಈ ವಾರಂಟ್‌ಗೆ ಬುಡಾ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ. ವೆಂಕಟ ಮಹಿಪಾಲ್ ಅವರು ಮಾತ್ರ ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಿ ನ್ಯಾಯಾಂಗಕ್ಕೆ ಗೌರವ ಸಲ್ಲಿಸುತ್ತಿದ್ದರು.

ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆದ ಕೂಡಲೇ ಜಿ. ಜನಾರ್ದನ ರೆಡ್ಡಿ ನೇತೃತ್ವದಲ್ಲಿ ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ, ಸಚಿವ ಬಿ. ಶ್ರೀರಾಮುಲು, ಕಂಪ್ಲಿ ಶಾಸಕ ಟಿ.ಎಚ್. ಸುರೇಶಬಾಬು, ರಾಯಚೂರು ಸಂಸದ ಸಣ್ಣಪಕ್ಕೀಪ್ಪ, ದೊಡ್ಡಪಕ್ಕೀರಪ್ಪ, ಆಂಧ್ರದ ರಾಯದುರ್ಗ ಕಾಂಗ್ರೆಸ್ ಶಾಸಕ ಕೆ. ರಾಮಚಂದ್ರಾರೆಡ್ಡಿ, ರಾಜ್ಯ ನಿಗರ್ತಿಕರ ಪುನರ್ವಸತಿ ಕೇಂದ್ರದ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ, ಡಾ. ವೆಂಕಟಮಹಿಪಾಲ್ ಮತ್ತು ಕಾರ್ಪೊರೇಟರ್ ಕೆ. ಹನುಮಂತಪ್ಪ ಅವರು ಜಾಮೀನು ಪಡೆದಿದ್ದಾರೆ.

ರೆಡ್ಡಿ ಪ್ರತಿಕ್ರಿಯೆ : ಈ ಕುರಿತು ಮಾತನಾಡಿದ ಜನಾರ್ದನ ರೆಡ್ಡಿ "ನ್ಯಾಯಾಲಯದ ಮೇಲೆ ನಮಗೆ ಅಪಾರವಾದ ಗೌರವವಿದೆ. ನ್ಯಾಯಾಲಯವನ್ನು ನಾವು ಕಡೆಗಣಿಸಿಲ್ಲ. ಈ ಪ್ರಕರಣವನ್ನು ಸಚಿವ ಸಂಪುಟ ಹಿಂದಕ್ಕೆ ಪಡೆದಿತ್ತು. ಈ ಹಿನ್ನೆಲೆಯಲ್ಲಿ ವಕೀಲರು ಗೊಂದಲ ಸೃಷ್ಟಿಸಿದ ಕಾರಣ ಸಮಸ್ಯೆ ನಿರ್ಮಾಣ ಆಗಿದೆ" ಎಂದು ನ್ಯಾಯಾಲಯದ ಆವರಣದಲ್ಲೇ ಮಾಧ್ಯಮಗಳಿಗೆ ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+