ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ತಳಮಳ: 72 ಶಾಸಕರಿಂದ ರಾಜೀನಾಮೆ

By Srinath
|
Google Oneindia Kannada News

Andhra Pradesh
ಹೈದರಾಬಾದ್‌, ಜುಲೈ 4: ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಹೋರಾಟವಾಗಿ ಆಂಧ್ರ ಪ್ರದೇಶದ 35 ಕಾಂಗ್ರೆಸ್‌ ಶಾಸಕರು ಮತ್ತು ಟಿಡಿಪಿಯ 33 ಶಾಸಕರು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ರಾಜ್ಯ ವಿಧಾನಸಭೆಯ ಸ್ಪೀಕರ್ ಮಲ್ಲು ಭಟ್ಟಿ ವಿಕ್ರಮಾರ್ಕ ಅವರಿಗೆ ಈ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ಜುಲೈ 4ರಂದು ಸಲ್ಲಿಸಿದ್ದಾರೆ.

ರಾಜೀನಾಮೆ ನೀಡಿದ ಕಾಂಗ್ರೆಸ್ ಸದಸ್ಯರ ಪೈಕಿ 11 ಮಂದಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಟಿಡಿಪಿಯ 4 ಭಿನ್ನಮತೀಯ ಶಾಸಕರೂ ರಾಜೀನಾಮೆ ಸಲ್ಲಿಸಿದ್ದು, ಒಟ್ಟು 72 ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ, ರಾಜ್ಯಸಭಾ ಸದಸ್ಯ ಕೆ. ಕೇಶವ ರಾವ್ ಸಹ ರಾಜೀನಾಮೆ ಸಲ್ಲಿಸಿದ್ದಾರೆ.

ಇದೇ ವೇಳೆ, ತೆಲಂಗಾಣ ಭಾಗದ ಇನ್ನೂ 53 ಶಾಸಕರು ಮತ್ತು 9 ಕಾಂಗ್ರೆಸ್ ಸಂಸದರು ಇಂದು ಸಂಜೆ ವೇಳೆಗೆ ರಾಜೀನಾಮೆ ನಿಡುವ ಸಾಧ್ಯತೆಗಳಿವೆ. ಈ ಮಧ್ಯೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಮತ್ತು ಮೇಡಕ್ ಸಂಸದೆ, ನಟಿ ವಿಜಯಶಾಂತಿ ಅವರು ಇನ್ನೂ ರಾಜೀನಾಮೆ ಸಲ್ಲಿಸಿಲ್ಲ.

ಸಾಮೂಹಿಕ ರಾಜೀನಾಮೆ ಪರಿಣಾಮವಾಗಿ ರಾಜಕೀಯ ಮತ್ತು ಸಂವಿಧಾನಾತ್ಮಕ ಬಿಕ್ಕಟ್ಟು ತೀವ್ರವಾಗಿದೆ. ಮುಖ್ಯಮಂತ್ರಿ ರೆಡ್ಡಿ ಅವರ ತಲೆನೋವು ಹೆಚ್ಚಾಗಿದೆ. ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಪಾರ್ಟಿಯ 17 ಶಾಸಕರು ರೆಡ್ಡಿಗೆ ಬೆಂಬಲ ನೀಡುವ ಸಾಧ್ಯತೆ ಇದೆಯಾದರೂ ರಾಜ್ಯ ಮತ್ತು ಕೇಂದ್ರದ ಎರಡೂ ಸರಕಾರಗಳಿಗೆ ವಿಷಯ ಪರಿಸ್ಥಿತಿ ತಲೆದೋರುವುದು ಖಚಿತವಾಗಿದೆ.

ಆಂಧ್ರ ವಿಧಾನಸಭೆ ಬಲ - 294
ಕಾಂಗ್ರೆಸ್‌ನ ಹಾಲಿ ಬಲ - 164
ತೆಲಂಗಾಣ ಕಾಂಗ್ರೆಸ್‌ ಶಾಸಕರು - 50
ಸರ್ಕಾರ ರಚನೆಗೆ ಬೇಕಿರುವ ಬಲ - 148

English summary
The Telangana statehood issue is on the boil again with all the 33 Telugu Desam Party MLAs and 35 Congress MLAs submitting their resignation to Deputy Speaker Mallu Bhatti Vikramarka on Monday (July 4) demanding the division of Andhra Pradesh and the formation of a separate state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X