ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣದೇವರಾಯನ ನಿಧಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಪತ್ತೆ!

By Srinath
|
Google Oneindia Kannada News

Krishnadevaraya of vijayanagara kingdom
ತಿರುವನಂತಪುರಂ, ಜುಲೈ 4: ಇಲ್ಲಿನ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಪತ್ತೆಯಾಗಿರುವ ಸುಮಾರು 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಬೆಲೆಬಾಳುವ ಸಂಪತ್ತಿಗೆ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀ ಕೃಷ್ಣದೇವರಾಯನೂ ಕೊಡುಗೆ ಸಲ್ಲಿಸಿದ್ದಾನೆ. ಕೃಷ್ಣದೇವರಾಯನ ಆಡಳಿತ ಕಾಲದ ಚಿನ್ನದ ನಾಣ್ಯಗಳೂ ಇಲ್ಲಿ ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ 'ದಿ ಹಿಂದೂ' ಪತ್ರಿಕೆ ಸೋಮವಾರ ವರದಿ ಮಾಡಿದೆ.

'ಶ್ರೀ ಕೃಷ್ಣದೇವರಾಯ ಆಡಳಿತ ಕಾಲದ ಚಿನ್ನದ ನಾಣ್ಯಗಳೂ ಪತ್ತೆಯಾಗಿವೆ. 29- 9-1109 ಎಂಬ ದಿನಾಂಕವಿರುವ ಕೆತ್ತನೆಯೂ ಲಭಿಸಿದೆ. ವಿಜಯನಗರ ಸಾಮ್ರಾಜ್ಯದ ಹಲವು ಆಭರಣಗಳು ಮುಖ್ಯಪ್ರಾಣ ದೇವ ಅನಂತಪದ್ಮನಾಭ ಸ್ವಾಮಿಯನ್ನು ಅಲಂಕರಿಸಿವೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ, ಶ್ರೀ ಕೃಷ್ಣದೇವರಾಯ ತನಗೆ ಆಪತ್ತು ಒದಗಿರುವುದನ್ನು ಅರಿತು ತನ್ನ ಸಾಮ್ರಾಜ್ಯದ ಸಂಪತ್ತನ್ನು ಅನೇಕ ಆನೆಗಳ ಮೇಲೆ ಸಾಗಿಸಿದನು ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ತನ್ನ ವಿಜಯನಗರ ಸಾಮ್ರಾಜ್ಯದ ಸಂಪತ್ತನ್ನು ಕೃಷ್ಣದೇವರಾಯನ ತಿರುಪತಿ ಬೆಟ್ಟಕ್ಕೂ ಸಾಗಿಸಿದ್ದ ಎಂದೂ ಅನೇಕ ಇತಿಹಾಸಕಾರರು ಈಗಾಗಲೇ ಅಭಿಪ್ರಾಯಪಟ್ಟಿರುವುದು ಇಲ್ಲಿ ದಾಖಲಾರ್ಹ.

English summary
The coins used during Vijayanagara King Krishnadevaraya are found in Padmanabhaswamy temple vaults says a report in 'The Hindu' dated July 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X