ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ವೈ ಸಿಸ್ಟರ್ ಕನ್ಸರ್ನ್: ನೆಂಟರಿಗೆ ಮೈಸೂರಲ್ಲಿ ಸೈಟು

By Srinath
|
Google Oneindia Kannada News

B S Yeddyurappa
ಬೆಂಗಳೂರು, ಜುಲೈ 4: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮನ್ನು ಮೈಸೂರಿನ ಮಹಾರಾಜ ಎಂದುಕೊಂಡು 'ಸಿಸ್ಟರ್ ಕನ್ಸರ್ನ್'ಅನ್ನು ತುಸು ಧಾರಾಳವಾಗಿಯೇ ತೋರಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮೂಲಕ ತಮ್ಮ ಸಂಬಂಧಿಕರಿಗೆ ಹತ್ತು ನಿವೇಶನಗಳನ್ನು ಹಂಚಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಈ ಸಂಬಂಧ ದಾಖಲೆಗಳನ್ನೂ ಬಿಡುಗಡೆ ಮಾಡಿದೆ.

ಮೈಸೂರಿನಲ್ಲಿ ಮುಡಾ ನಿರ್ಮಿಸಿರುವ ವಿಜಯನಗರ ಮೂರನೇ ಹಂತದ ಸುಸಜ್ಜಿತ ಬಡಾವಣೆಯಲ್ಲಿ 10 ನಿವೇಶನಗಳನ್ನೂ ಮುಖ್ಯಮಂತ್ರಿಯವರ ಸಂಬಂಧಿಕರಿಗೆ ನೀಡಲಾಗಿದೆ. 2009 ಮತ್ತು 2010ರ ಅವಧಿಯಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂಬ ಅಂಶ ದಾಖಲೆಗಳಲ್ಲಿ ಇದೆ.

ಯಡಿಯೂರಪ್ಪ ಅವರ ಸಂಬಂಧಿಕರಾದ ಬಿ.ಎಂ.ಜಗದಾಂಬ, ಬಿ.ಎಂ. ನಂದಿಬಸಪ್ಪ, ಬಿ.ಆರ್. ಸರ್ವಮಂಗಳಾ, ನಾಗಮ್ಮ, ಎಸ್.ಸಿ. ರಾಜೇಶ್, ಗೌರಮ್ಮ, ಗೋಪಾಲಕೃಷ್ಣ, ಗುರುಮೂರ್ತಿ, ಪಿ.ಎನ್. ಪ್ರಕಾಶ್ ಮತ್ತು ಜಿ. ಚಂದ್ರಕಲಾ ಅವರಿಗೆ ವಿವಿಧ ಅಳತೆಯ ನಿವೇಶನಗಳನ್ನು ಮುಖ್ಯಮಂತ್ರಿಯವರ ವಿವೇಚನಾ ಕೋಟಾದ ಅಡಿ ಮಂಜೂರು ಮಾಡಲಾಗಿದೆ. ಗೌರಮ್ಮ ಅವರು ಯಡಿಯೂರಪ್ಪ ಅವರ ಸಹೋದರಿ, ರಾಜೇಶ್ ಮುಖ್ಯಮಂತ್ರಿಯವರ ಸಹೋದರಿಯ ಪುತ್ರ, ಉಳಿದವರು ಅವರ ಸಂಬಂಧಿಕರು ಎಂದು ಜೆಡಿಎಸ್ ತಿಳಿಸಿದೆ.

ಗಮಾರ್ಹವೆಂದರೆ, ಯಡಿಯೂರಪ್ಪ ಅವರು ತಮ್ಮ ಸಂಬಂಧಿಕರಿಗೆ ಹತ್ತು ನಿವೇಶನಗಳನ್ನು 'ಜಿ' ಕೋಟಾದ ಅಡಿ ಮಂಜೂರು ಮಾಡಿದ್ದಾರೆ ಎಂದಷ್ಟೇ ಪಕ್ಷ ಹೇಳಿದೆ. ಆದರೆ, ಇಲ್ಲಿ ಕಾನೂನು ಅಥವಾ ನಿಯಮಗಳ ಉಲ್ಲಂಘನೆ ಆಗಿರುವ ಬಗ್ಗೆ ಯಾವುದೇ ವಿಷಯವನ್ನೂ ಪ್ರಸ್ತಾಪಿಸಿಲ್ಲ.

ಜಗದಾಂಬ, ರಾಜೇಶ್, ಪ್ರಕಾಶ್ ಮತ್ತು ಚಂದ್ರಕಲಾ ಅವರಿಗೆ 50x80 ಅಡಿ ವಿಸ್ತೀರ್ಣದ ನಿವೇಶನ ನೀಡಲಾಗಿದೆ. ಸರ್ವಮಂಗಳಾ, ನಾಗಮ್ಮ, ಗೌರಮ್ಮ, ಗೋಪಾಲಕೃಷ್ಣ, ಗುರುಮೂರ್ತಿ ಅವರಿಗೆ 40x60 ಅಡಿ ಮತ್ತು ನಂದಿಬಸಪ್ಪ ಅವರಿಗೆ 30x40 ಅಡಿ ವಿಸ್ತೀರ್ಣದ ನಿವೇಶನ ನೀಡಲಾಗಿದೆ. ಫಲಾನುಭವಿಗಳು ಮೈಸೂರು, ಮಂಡ್ಯ ಜಿಲ್ಲೆಯ ಬೂಕನಕೆರೆ, ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ, ಬೆಂಗಳೂರು ಮತ್ತಿತರ ವಿಳಾಸ ನೀಡಿ ನಿವೇಶನ ಪಡೆದಿದ್ದಾರೆ.

ಸೈಟು ಹಂಚಿಕೆ ನಿಜ: 'ಮೂಡಾ ಸೈಟು ಪಡೆದ 10 ಮಂದಿ ಪೈಕಿ ನಾಲ್ವರು ನನ್ನ ಬಂಧುಗಳು. ತಂಗಿ ಮತ್ತು ಮಕ್ಕಳಿಗೆ ಸೈಟು ಹಂಚಿರುವುದು ನಿಜ' ಎಂದು ಸಿ ಎಂ ಯಡಿಯೂರಪ್ಪ ಅವರು ಸೋಮವಾರ ಬೆಳಗ್ಗೆ ಸಮರ್ಥಿಸಿಕೊಂಡಿದ್ದಾರೆ.

English summary
The JDS has came up with a fresh allegation against the Chief Minister B S Yeddyurappa. The party alleged that the CM had allotted residential sites of Mysore Urban Development Authority (MUDA) to 10 of his close relatives under his discretionary quota by throwing all rules to the winds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X