ಜನತೆಗೆ ಮತ್ತೊಂದು ಶಾಕ್, ವಿದ್ಯುತ್ ದರ ಶೀಘ್ರ ಏರಿಕೆ?

ರಾಜ್ಯದ ಎಲ್ಲ ಎಸ್ಕಾಂಗಳು ಪ್ರತಿ ಯೂನಿಟ್ ವಿದ್ಯುತ್‌ಗೆ 88 ಪೈಸೆ ಹೆಚ್ಚಿಸುವಂತೆ ರಾಜ್ಯ ವಿದ್ಯುತ್ ನಿಯಂತ್ರಣಾ ಆಯೋಗಕ್ಕೆ ಮನವಿ ಸಲ್ಲಿಸಿವೆ. ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವುದರಿಂದ ವಿದ್ಯುತ್ ದರವನ್ನು ಹೆಚ್ಚಿಸುವುದು ಅನಿವಾರ್ಯ ಎನ್ನಲಾಗಿದೆ.
ಎನ್ಟಿಪಿಸಿ ಜೊತೆ ನೂರು ಮೆಗಾವ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡುತ್ತ ಶೋಭಾ, ದರ ಏರಿಕೆ ನಿರ್ಧಾರ ಆಯೋಗದ ಕೈಯಲ್ಲಿದೆ. ರಾಜ್ಯದಲ್ಲಿ ಸೋಲಾರ್ ಉತ್ಪಾದನೆಗೆ ವಿಪುಲ ಅವಕಾಶವಿದೆ. ಎನ್ಟಿಪಿಸಿ ಗುಳೇದಗುಡ್ಡದಲ್ಲಿ ಸ್ಥಾಪಿಸಿದ ಪವನ ವಿದ್ಯುತ್ ಯೋಜನೆಯಿಂದ ಸರಕಾರ ಪ್ರತಿ ಯುನಿಟ್ ಗೆ 3.70 ನೀಡಿ ಖರೀದಿಸುತ್ತಿದೆ.
ರಾಜ್ಯ ಸರಕಾರದ ನಾಲ್ಕು ಮಹಾತ್ತ್ವಾಕಾಂಕ್ಷಿ ಯೋಜನೆಗಳಾದ ಯರಮರಸ್, ಯಡ್ಲಾಪುರ, ಛತ್ತೀಸ್‌ಗಡ ಮತ್ತು ಬಳ್ಳಾರಿ ಘಟಕಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದೆ. ಇದರಿಂದ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ ಎಂದರು.












Click it and Unblock the Notifications