ನಾನು ದಂಡಪಿಂಡ ಪ್ರಧಾನಿ ಅಲ್ಲ: ಮನಮೋಹನ್ ಸಿಂಗ್

Manmohan singh
ನವದೆಹಲಿ, ಜೂನ್ 29: ಜನ ಲೋಕಪಾಲ ವ್ಯಾಪ್ತಿಗೆ ಒಳಪಡಲು ನಾನು ಸಿದ್ಧ ಎಂದು ಪ್ರಧಾನಿ ಮನಮೋಹನ್ ಸಿಂಗ್ ಘೋಷಿಸಿದ್ದಾರೆ. ಆದರೆ ಸಚಿವ ಸಂಪುಟ ಮತ್ತು ಮಿತ್ರ ಕೂಟ ಈ ಬಗ್ಗೆ ಭಿನ್ನ ನಿಲುವು ತಳೆದಿದೆ ಎಂದು ಪ್ರಧಾನಿ ಸಿಂಗ್ ಅವರು ಬುಧವಾರ ರಾಜಧಾನಿಯಲ್ಲಿ ಐದು ಮಂದಿ ಹಿರಿಯ ಪತ್ರಿಕಾ ಸಂಪಾದಕರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ನಾನೆಂದಿಗೂ ಕುಂಟು (ಲೇಮ್ ಡಕ್) ಪ್ರಧಾನಿ ಅಲ್ಲ ಎಂದ ಸಿಂಗ್, ಇದು ಪ್ರತಿಪಕ್ಷಗಳ ವ್ಯವಸ್ಥಿತ ಅಪಪ್ರಚಾರ ಎಂದು ತಮ್ಮನ್ನು ಬಲವಾಗಿ ಸಮರ್ಥಿಸಿಕೊಂಡರು. ಸೋನಿಯಾ ಗಾಂಧಿ ತಮಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಸೋನಿಯಾರನ್ನು ಪ್ರಧಾನಿ ಸಿಂಗ್ ಮನಸಾರೆ ಕೊಂಡಾಡಿದರು.

ಮಾಧ್ಯಮಗಳ ಪಾತ್ರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಿಂಗ್ ಅವರು ಮಾಧ್ಯಮಗಳು 'ಆರೋಪ ಹೊರಿಸುವ, ವಿಚಾರಣೆ ನಡೆಸುವ ಮತ್ತು ತೀರ್ಪು ನೀಡುವ' ಹೊಣೆಗಾರಿಕೆಯನ್ನು ಸ್ವಯಂ ಹೊತ್ತಿವೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಸಚಿವ ಸಂಪುಟ ಪುನಾರಚನೆ 'ಕಾಮಗಾರಿ ಪ್ರಗತಿಯಲ್ಲಿದೆ' ಎಂಬಂತಾಗಿದೆ ಎಂದು ಹೇಳಿದ ಪ್ರಧಾನಿ ಸಂಪುಟ ರಚನೆ ಯಾವಾಗ, ಯಾರೆಲ್ಲ ಬಂದು ಹೋಗಿ ಮಾಡಲಿದ್ದಾರೆ ಎಂಬ ಒಳಗುಟ್ಟು ಬಿಟ್ಟುಕೊಡಲಿಲ್ಲ.

ನಾಲ್ಕು ತಿಂಗಳ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಪ್ರಧಾನಿ ಸಿಂಗ್, ಇದಾದ ನಂತರ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+