ಕಸದ ವಾಹನದಲ್ಲಿ ಹುತಾತ್ಮ ಯೋಧರ ಶವ ಯಾತ್ರೆ!

ಕಿರಂದುಲ್ ಎಂಬಲ್ಲಿ ನೆಲಬಾಂಬ್ ಸ್ಫೋಟಿಸಿ ಮೂವರು ಯೋಧರನ್ನು ನಕ್ಸಲರು ಬಲಿತೆಗೆದುಕೊಂಡಿದ್ದರು. ಮಂಗಳವಾರ ನಕ್ಸಲರಿಗೆ ಬಲಿಯಾದ ಲಕ್ಷ್ಮಣ್ ಭಗತ್, ಅಲ್ಸಾನ್ ಎಕ್ಕಾ ಹಾಗೂ ಭೂಷಣ್ ಮಾಂಡವಿ ಎಂಬ ಯೋಧರ ಶವವನ್ನು ಸಾಗಿಸಲು ಬೇರೆ ವಾಹನ ಸಿಗದಿದ್ದಾಗ, ಪೊಲೀಸರು ಪಾಲಿಕೆಯ ಕಸ ಸಾಗಿಸುವ ವಾಹನವನ್ನೇ ಬಳಸಿ 40 ಕಿ.ಮೀ ದೂರವಿರುವ ದಾಂತವೇಡಕ್ಕೆ ಒಯ್ದಿದ್ದಾರೆ.
ಟ್ರಕ್ ಅನ್ನು ಸ್ವಚ್ಛ ಮಾಡಿ ಬಳಿಕ ಯೋಧರ ಶವವನ್ನು ಅದರಲ್ಲಿ ಇರಿಸಲಾಯಿತು ಎಂದು ದಾಂತೇವಾಡ ಪೊಲೀಸ್ ಸೂಪರಿಂಟೆಂಡೆಂಟ್ ಅಂಕಿತ್ ಗಾರ್ಗ್ ತಿಳಿಸಿದ್ದಾರೆ. ಆದರೆ, ದಾಂತೇವಾಡ ಸುತ್ತಮುತ್ತಲಿನ ಜನರು ಪೊಲೀಸರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಸ್ಥಳೀಯ ಜಿಲ್ಲಾಧಿಕಾರಿ ಕೂಡಾ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಆದರೆ ಕಿರಂದುಲ್ ಸುತ್ತಮುತ್ತ ಬೇಕಾದಷ್ಟು ಅಂಬ್ಯುಲೆನ್ಸ್‌ಗಳಿವೆ, ಆಸ್ಪತ್ರೆಗಳಿವೆ. ಹೀಗಿದ್ದರೂ, ಇದರ ಅಗತ್ಯ ಪಡೆಯಲು ಪೊಲೀಸರು ಪ್ರಯತ್ನಿಸದೇ ಕಸದ ಟ್ರಕ್‌ನಲ್ಲಿ ಯೋಧರ ಶವ ಸಾಗಿಸಿ ಅವಮಾನ ಮಾಡಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications