ಮೈಸೂರು ಮಾಜಿ ಡಿಸಿ ಹರ್ಷ ಗುಪ್ತ ಮೇಲೆ ಕ್ರಿಮಿನಲ್ ಕೇಸ್
ಮೈಸೂರು
ಜೂ 29: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರು ತಮ್ಮ ಕುಟುಂಬ ಸಮೇತ ರೆಸಾರ್ಟ್ ವೊಂದರಲ್ಲಿ ಪುಕ್ಕಟೆ ಮೋಜು, ಮಸ್ತಿ ನಡೆಸಿದ ಪ್ರಕರಣ ಈಗ ಹೈಕೋರ್ಟ್ ಮೆಟ್ಟಿಲೇರಿದೆ. ಸದ್ಯ ಹರ್ಷ ಗುಪ್ತ ಅವರು ಸರ್ವಶಿಕ್ಷಾ ಅಭಿಯಾನ ಯೋಜನೆಯ ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ. id="toptextpromo">ವಾರಾಂತ್ಯ
ಬಂದರೆ ಹರ್ಷ ಗುಪ್ತ ಹಾಗೂ ಅವರ ಸ್ನೇಹಿತರು, ಕುಟುಂಬ ವರ್ಗ ಸೇರಿದಂತೆ 15 ರಿಂದ 20 ಜನ ಪ್ಲಾನೆಟ್ ಎಕ್ಸ್ ಅಮ್ಯೂಸ್ ಮೆಂಟ್ ಪಾರ್ಕ್ ಎಂಬ ರೆಸಾರ್ಟ್ ನಲ್ಲಿ ಬೀಡು ಬಿಡುತ್ತಿತ್ತು. ಕುಡಿದು ತಿಂದು ಮಜಾ ಮಾಡಿ ಹೋಗುತ್ತಿದ್ದ ಹರ್ಷ ಗುಪ್ತ, ಬಿಲ್ ಮಾತ್ರ ಪಾವತಿಸುತ್ತಿರಲಿಲ್ಲ. ರೆಸಾರ್ಟ್ ನವರು ಬಿಲ್ ಹಣ ಕೇಳಿದರೆ ಬೆದರಿಕೆ ಒಡ್ದುತ್ತಿದ್ದರು. ಇದೂ ಸಾಲದೆಂಬಂತೆ ರೆಸಾರ್ಟ್ ನ ಕಟ್ಟಡ ಅಕ್ರಮವಾಗಿ ಕಟ್ಟಲಾಗಿದೆ ಎಂದು ಹೇಳಿ ನೆಲಸಮಗೊಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈಗ
ನ್ಯಾಯ ಕೋರಿ ರೆಸಾರ್ಟ್ ನ ಮಾಲೀಕ ಪಾಂಡುರಂಗ ಶೆಣೈ, ಹೈಕೋರ್ಟ್ ಮೊರೆ ಹೊಕ್ಕಿದ್ದಾರೆ. ಸುಮಾರು 5 ಲಕ್ಷರು ಬಾಡಿಗೆ ಹಾಗೂ 2 ಕೋಟಿ ರುಗೂ ಅಧಿಕ ನಷ್ಟವಾಗಿದೆ ಇದನ್ನು ಹರ್ಷ ಗುಪ್ತ ತುಂಬಿಸಿಕೊಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ. ಶೆಣೈ ಅವರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಡಿವಿ ಶೈಲೇಂದ್ರಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಯನ್ನು ಮುಂದೂಡಿದೆ.











Click it and Unblock the Notifications