ಬನಶಂಕರಿ ವಾರ್ಡ್: ಅಚ್ಚರಿ ಫಲಿತಾಂಶ, ಬಿಜೆಪಿಗೆ ಗೆಲುವು

ಉಸ್ತುವಾರಿ ಸಚಿವ ಆರ್.ಅಶೋಕ್ ಅವರ ತಂತ್ರಗಾರಿಕೆ ಫಲ ನೀಡಿದ್ದು ಶಾಸಕರಾದ ಸತೀಶ್‌ರೆಡ್ಡಿ, ವಿಜಯಕುಮಾರ್, ಎಂ.ಕೃಷ್ಣಪ್ಪ ಮಾಜಿ ಮೇಯರ್ ನಟರಾಜ್ 10 ಮಂದಿ ಪಾಲಿಕೆ ಸದಸ್ಯರು ಎಂಟು ದಿನಗಳ ಕಾಲ ವಾರ್ಡ್‌ನಲ್ಲೇ ಠಿಕಾಣಿ ಹೂಡಿ ಗೆಲುವಿಗೆ ಶ್ರಮಿಸುವಂತೆ ಮಾಡಿದ್ದ ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.
ಬಸವರಾಜ್ ಅವರು 7901 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಅನ್ಸರ್ ಪಾಷಾ 5406 ಹಾಗೂ ಜೆಡಿಎಸ್‌ನ ಮೊಹಮ್ಮದ್ ಅಕ್ಬರ್ ಅಲಿ 5129 ಮತಗಳನ್ನು ಪಡೆದಿದ್ದಾರೆ. ದಿವಾನ್ ಅಲಿ ಹತ್ಯೆ ಆರೋಪ ಎದುರಿಸುತ್ತಿರುವ ಹಾಗೂ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದ ಅಪ್ಸರ್ ಖಾನ್ ಕೇವಲ 80 ಮತ ಪಡೆದಿದದ್ದು 8 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಜೆಎಸ್‌ಎಸ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡು 9.30 ಕ್ಕೆ ಫಲಿತಾಂಶ ಪ್ರಕಟಗೊಂಡಿತು. ಬನಶಂಕರಿ ವಾರ್ಡ್‌ನ 34 ಮತಗಟ್ಟೆಗಳಲ್ಲಿ ಭಾನುವಾರ ಮತದಾನ ನಡೆದಿತ್ತು. ಒಟ್ಟು 35516 ಮತದಾರರ ಪೈಕಿ 18955 ಮತಗಳು ಚಲಾವಣೆಯಾಗಿದ್ದವು.












Click it and Unblock the Notifications