ಬೆಲೆ ಏರಿಕೆ ಚಿಂತೆ- ಸಾಯೋಕೆ ಬಿಡಿ: ಬಿಜೆಪಿ ಸಂಸದ!
ಭೋಪಾಲ,
ಜೂನ್ 28: ಬೆಲೆ ಏರಿಕೆಯಿಂದ ಜನತೆ ಸಾಯುವುದನ್ನು ನೋಡುವುದಕ್ಕಿಂತ ಮೊದಲು, ಜನಪ್ರತಿನಿಧಿಯಾದ ನನಗೆ ದಯಾಮರಣ ಕರುಣಿಸಿ ಎಂದು ರಾಜ್ಯಸಭಾ ಸದಸ್ಯ ಪ್ರಭಾತ್ ಝಾ ವಿನೂತನ ಬೇಡಿಕೆ ಮುಂದಿಟ್ಟಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ಮುಖ್ಯಸ್ಥರಾದ 54 ವರ್ಷ ವಯಸ್ಸಿನ ಝಾ ಈ ಕುರಿತು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಪತ್ರ ಬರೆದಿದ್ದಾರೆ. id="toptextpromo">'ದೇಶದಲ್ಲಿನ
ಬೆಲೆ ಏರಿಕೆ ಹಾಗೂ ವ್ಯಾಪಕ ಭ್ರಷ್ಟಾಚಾರ ಜನರನ್ನು ಸಾವಿನಂಚಿಗೆ ದೂಡಿದೆ. ನೀವು ದೇಶದ 115 ಕೋಟಿ ಜನರ ತಾಯಿ. ನಿಮಗೂ ಬೆಲೆ ಏರಿಕೆಯಿಂದ ದುಃಖ ಆಗಿರಬಹುದು' ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಾಂಗ್ರೆಸ್
ಲೇವಡಿ:
ಝಾ
ಅವರ
ಈ
ಬೇಡಿಕೆಯನ್ನು
ರಾಜಕೀಯ
ದೊಂಬರಾಟ
ಎಂದು
ಕಾಂಗ್ರೆಸ್
ಲೇವಡಿ
ಮಾಡಿದೆ.
'ಅವರಿಗೆ
ಪಕ್ಷದ
ಮುಖಂಡರೊಂದಿಗೆ
ಭಿನ್ನಾಭಿಪ್ರಾಯ
ಇರಬೇಕು.
ಹಾಗಾಗಿ
ಈ
ಪತ್ರ
ಬರೆದಿದ್ದಾರೆ.
ಇಲ್ಲದಿದ್ದರೆ
ಮಧ್ಯಪ್ರದೇಶದಲ್ಲಿರುವ
ತಮ್ಮ
ಪಕ್ಷದ
ಸರ್ಕಾರದ
ಜತೆ
ಮಾತನಾಡಿ
ಮಮತಾ
ಬ್ಯಾನರ್ಜಿ
ಅವರಂತೆ
ರಾಜ್ಯದಲ್ಲೂ
ತೆರಿಗೆ
ಇಳಿಸಲು
ಮನವೊಲಿಸುತ್ತಿದ್ದರು'
ಎಂದು
ರಾಜ್ಯ
ಕಾಂಗ್ರೆಸ್
ಮುಖ್ಯಸ್ಥ
ಕಾಂತಿಲಾಲ್
ಭೂರಿಯಾ
ಹೇಳಿದ್ದಾರೆ.












Click it and Unblock the Notifications