• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಣಿಪಾಲದಿಂದ ಬಜಪೆಗೆ ವೋಲ್ವೋ ಬೇಡವೇ ಬೇಡ

By Mahesh
|
ಉಡುಪಿ ಜೂ 27: ಮಣಿಪಾಲದಿಂದ ಬಜಪೆಗೆ ವೋಲ್ವೋ ಬಸ್ ಆರಂಭಿಸುವ ಸರ್ಕಾರದ ಪ್ರಸ್ತಾವಿತ ಯೋಜನೆಗೆ ಮಣಿಪಾಲ, ಬಜಪೆ ಮತ್ತು ಮಂಗಳೂರಿನ ನೂರಾರು ಮಂದಿ ಟ್ಯಾಕ್ಸಿ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಡ ಮತ್ತು ಮಧಮ ವರ್ಗದ ಜನರ ಹೊಟ್ಟೆಗೆ ಹೊಡೆಯಲು, ವೋಲ್ವೋ ಬಸ್ ಪ್ರಾರಂಭಿಸುವ ಚಿಂತನೆಯನ್ನು ಶ್ರೀಮಂತರು ಹಾಗೂ ಶ್ರೀಮಂತ ಸಂಸ್ಥೆಗಳ ಪರವಾಗಿರುವ ರಾಜಕಾರಣಿಗಳು ಯೋಚಿಸಿದ್ದಾರೆ. ಈ ಯೋಜನೆ ಕಾರ್ಯಗತಗೊಂಡರೆ 400ಕ್ಕೂ ಅಧಿಕ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಟ್ಯಾಕ್ಸಿ ಚಾಲಕರು ತಿಳಿಸಿದ್ದಾರೆ.

ಮಣಿಪಾಲಕ್ಕೆ ತುಂಬಾ ಮಂದಿ ಪ್ರವಾಸಿಗರು ಬರುತ್ತಿದ್ದು, ಇವರ ಬಾಡಿಗೆಯನ್ನು ನಂಬಿಕೊಂಡೇ ಟ್ಯಾಕ್ಸಿ ಚಾಲಕರು ಹಾಗೂ ಇವರುಗಳ ಕುಟುಂಬಗಳು ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ಬದುಕಿನ ಮತ್ತು ಆದಾಯದ ಮೂಲಕ್ಕೆ ಪೆಟ್ಟು ಬಿದ್ದರೆ, ಅದನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇಲ್ಲಿನ ಟ್ಯಾಕ್ಸಿ ಮಾಲಕರಿಗಾಗಲೀ, ಚಾಲಕರಿಗಾಗಲೀ ಇಲ್ಲ. ವಿದೇಶಿ ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಹಾಗೂ ಪ್ರವಾಸಿಗರನ್ನು ನಂಬಿಕೊಂಡೇ ಲಕ್ಷಗಳ ಲೆಕ್ಕದಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ಟ್ಯಾಕ್ಸಿ ಇಟ್ಟುಕೊಂಡು ಬಾಡಿಗೆಯಿಂದ ಜೀವನ ಸಾಗಿಸುತ್ತಿರುವ ಜನರು, ವೋಲ್ವೋ ಬಸ್ ಆರಂಭ ಗೊಂಡದ್ದೇ ಆದರೆ ನಿರ್ಗತಿಕರಾಗಲಿದ್ದಾರೆ ಎಂದು ಟ್ಯಾಕ್ಸಿ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸರಕಾರ ಖಂಡಿತವಾಗಿಯೂ ವೋಲ್ವೋ ಬಸ್ ಸಂಚಾರವನ್ನು ಆರಂಭಿಸಲಿದೆ ಎಂಬ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್. ಆಚಾರ್ಯರ ಹೇಳಿಕೆಗೆ ಟ್ಯಾಕ್ಸಿ ಚಾಲಕರು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧವಾಗಿ ಟ್ಯಾಕ್ಸಿಮೆನ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಅವರು ಕೂಡಾ ಸುಮ್ಮನಿರುವುದು ಆತಂಕದ ವಿಷಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ವಿರುದ್ದ ಹೋರಾಟ ಹಮ್ಮಿಕೊಳ್ಳಲು ಇದೀಗ ಟ್ಯಾಕ್ಸಿ ಚಾಲಕರು ನಿರ್ಧರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Taxi Drivers Association in Mangalore is opposing the government proposal to run Volvo buses between Manipal and Bajpe. This bus service will have adverse effect on over 400 taxi driver's families. Association president MLA Raghupati Bhat must convince minister VS Acharya not to bring Volvo in this route.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more