ರಾಮದೇವ್ ಪಟ್ಟ ಶಿಷ್ಯ ಬಾಲಕೃಷ್ಣನ ಮೇಲೆ ಸಿಬಿಐ ಕಣ್ಣು
ನವದೆಹಲಿ
ಜೂ 26: ನಕಲಿ ದಾಖಲೆ ನೀಡಿ ಅಗತ್ಯಕ್ಕಿಂತ ಹೆಚ್ಚು ಪಾಸ್‌ಪೋರ್ಟ್ ಪಡೆದಿರುವ ಆರೋಪವನ್ನು ಬಾಬಾ ರಾಮ್‌ದೇವ್ ಅವರ ಪಟ್ಟ ಶಿಷ್ಯ ಆಚಾರ್ಯ ಬಾಲಕೃಷ್ಣ ಹೊತ್ತಿದ್ದಾರೆ. ನೇಪಾಳ ಮೂಲದ ಬಾಲಕೃಷ್ಣ ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸಿ, ವಿಚಾರಣೆ ನಡೆಸಲು ಸಿಬಿಐ ಸಿದ್ಧತೆ ನಡೆಸಿದೆ. ಬಾಬಾ ರಾಮದೇವ್ ಅವರ ಉಪವಾಸ ಸತ್ಯಾಗ್ರಹದ ಫಲವನ್ನು ಈಗ ಬಾಬಾರ ಶಿಷ್ಯರು ಅನುಭವಿಸುವಂತೆ ಮಾಡಲು ಯುಪಿಎ ಸರ್ಕಾರ ಟೊಂಕ ಕಟ್ಟಿ ನಿಂತಿದೆ. id="toptextpromo">ಬಾಲಕೃಷ್ಣ
ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್ ಪಡೆದಿದ್ದಾರೆ ಎಂದು ಸಿಬಿಐಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಯುವ ಸಾಧ್ಯತೆಯಿದೆ. ಒಂದಕ್ಕಿಂತ ಹೆಚ್ಚು ಪಾಸ್ ಪೋರ್ಟ್ ಹೊಂದಿರುವ ಬಾಲಕೃಷ್ಣ, ನಕಲಿ ಪಾಸ್ ಪೋರ್ಟ್ ಹೊಂದಿದ್ದಾರೆ, ಈ ಬಗ್ಗೆ ಪರಿಶೀಲಿಸಿ ಎಂದು ಸಿಬಿಐಗೆ ಕೇಂದ್ರ ಸರ್ಕಾರ ಸೂಚಿಸಿತ್ತು. id='are-slot-1' class='oiad oi-axt oiadv'> id='top-searched-articles'>ಬಾಲಕೃಷ್ಣ
ಅವರ ರಾಷ್ಟ್ರೀಯತೆ ಕೂಡಾ ಪ್ರಶ್ನಾರ್ಹವಾಗಿದ್ದು, ಭಾರತದ ಎರಡು ಪಾಸ್ ಪೋರ್ಟ್ ಅವರ ಬಳಿ ಇದೆ. ನೇಪಾಳ ನಾಗರೀಕ ಕಾಯಿದೆ 2006ರ ಪ್ರಕಾರ, ಎರಡು ದೇಶಗಳಲ್ಲಿ ಪೌರತ್ವ ಹೊಂದಲು ಅವಕಾಶವಿಲ್ಲ. ಭಾರತದಲ್ಲೂ ದ್ವಿಪೌರತ್ವಕ್ಕೆ ಮಾನ್ಯತೆಯಿಲ್ಲ. ಒಂದು ವೇಳೆ ನಕಲಿ ಪಾಸ್ ಪೋರ್ಟ್ ಹೊಂದಿರುವ ಆರೋಪ ಸಾಬೀತಾದರೆ ಕನಿಷ್ಠ 5 ವರ್ಷದ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ.











Click it and Unblock the Notifications