ಆಣೆ ಪ್ರಮಾಣ ಮಾಡಲು ಈಗಲೂ ನಾನು ಸಿದ್ಧ :ಎಚ್ಡಿಕೆ

ಮೂಲಗಳ ಪ್ರಕಾರ ಉಜಿರೆಯಲ್ಲಿ ನಾಳೆ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಕೆಲ ಸ್ಫೋಟಕ ಮಾಹಿತಿಯನ್ನು ಎಚ್ಡಿಕೆ ಹೊರಹಾಕಲಿದ್ದಾರಂತೆ. ಜೂ 27ರಂದು ಬೆಳಗ್ಗೆ ಧರ್ಮಸ್ಥಳ ಮಂಜುನಾಥಸ್ವಾಮಿ ದರ್ಶನದ ನಂತರ ಜೆಡಿಎಸ್ ಸಮಾವೇಶದಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ
ಜೆಡಿಎಸ್ ದಕ ಜಿಲ್ಲಾ ಘಟಕದ ಕಾರ್ಯದರ್ಶಿ ಎಂಜಿ ಹೆಗಡೆ ಮಧ್ನಾನ್ಹ 12 ಗಂಟೆಗೆ ಪತ್ರಿಕಾಗೋಷ್ಠಿ ಕರೆದರೆ, ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಚೇರಿಯಲ್ಲಿ ದಕ ಜಿಲ್ಲಾ ಘಟಕದ ಅಧ್ಯಕ್ಷ ಎಂ ಬಿ ಸದಾಶಿವ ಪ್ರತ್ಯೇಕ ಪತ್ರಿಕಾಗೋಷ್ಠಿ ಕರೆದಿದ್ದರು. ಕುಮಾರಸ್ವಾಮಿ ಉಜಿರೆ ಪೋಗ್ರಾಂ ಬಗ್ಗೆ ತಿಳಿಸಲು ಬೆಳ್ತಂಗಡಿಯಲ್ಲಿ ಜೆಡಿಎಸ್ ಮುಖಂಡರು ಎರಡು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ್ದು ಯಾಕೋ ತಿಳಿದಿಲ್ಲ.
ಜೆಡಿಎಸ್ ಯಾತ್ರೆ ವಿವರ: ಬೆಳಗ್ಗೆ ಚಾಮುಂಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಕೆ. ಕುಮಾರಸ್ವಾಮಿಯಿಂದ ಯಡಿಯೂರಪ್ಪ ಸರ್ಕಾರದ ವಿರುದ್ಧ ಬೃಹತ್ ಯಾತ್ರೆ ಕೈಗೊಳ್ಳುವ ಸಂಕಲ್ಪ. ಕಾರಿನಲಿ ರಾಮನಗರಕ್ಕೆ ಆಗಮನ. ಬಲಮುರಿ ದೇವಸ್ಥಾನ, ದರ್ಗಾಕ್ಕೆ ಭೇಟಿ, ವಿಶೇಷ ಪೂಜೆ ಸಲ್ಲಿಕೆ. ರೋಡ್ ಷೋ ಮೂಲಕ, ಮಾಗಡಿ, ಬೆಳ್ಳೂರು ಕ್ರಾಸ್, ಚನ್ನರಾಯನಪಟ್ಟಣ, ಹಾಸನ, ಸಕಲೇಶಪುರ ಮಾರ್ಗದಲ್ಲಿ ಸಂಚಾರ. ಈ ಮಧ್ಯೆ ಬೆಂಗಳೂರಿನ ಶಾಸಕರ ಕಚೇರಿಯಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ 20 ಶಾಸಕರನ್ನು ಕರೆದುಕೊಂಡು ಧರ್ಮಸ್ಥಳದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.












Click it and Unblock the Notifications