ಹೇಳಿ, ವಾಟಾಳ್ ಏಕೀ ಮೌನ? ನಿಮ್ಮಾಣೆ ಎದ್ದೇಳಿ...
ಬೆಂಗಳೂರು,
ಜೂನ್ 23: ಧರ್ಮಸ್ಥಳದ ಶ್ರೀಕ್ಷೇತ್ರದಲ್ಲಿ ಆಣೆ-ಪ್ರಮಾಣ ಮಾಡುವ ವಿಚಾರದಲ್ಲಿ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳ ಜತೆಗೆ ಹಾಲಿ ಸಚಿವೆಯೂ ಸೇರಿಕೊಂಡಿದ್ದಾರೆ. ಮಠ ಮಾನ್ಯಗಳು ಆಣೆ-ಪ್ರಮಾಣ ಬೇಡ ಎನ್ನುತ್ತಿದ್ದರೆ ಬೇಡ, ಬೇಡ ಅದು ನಮಗೂ ಸಮ್ಮತವಲ್ಲ. ಅದರ ಬದಲಿಗೆ ಧರ್ಮಸ್ಥಳದಲ್ಲಿ ಕುದಿಯುವ ಎಣ್ಣೆಯಲ್ಲಿ ಈ ಮೂವರೂ ಕೈ ಇಡಲಿ ಕೈ ಇಡಲಿ ಎನ್ನುವವರೂ ಇದ್ದಾರೆ. id="toptextpromo">ಈ
ಮಧ್ಯೆ, ಅವರೆಲ್ಲಿ ವಾಟಾಳ್ ನಾಗರಾಜ್ ? ಇಂತಹ ವಿಶೇಷ ಸಂದರ್ಭಗಳಲ್ಲಿ ತಮ್ಮ ಚಿತ್ರ ವಿಚಿತ್ರ, ವಿಭಿನ್ನ ಪ್ರತಿಭಟನೆಗಳಿಂದ, ವ್ಯಾಖ್ಯಾನಗಳಿಂದ ಪ್ರತಿಕ್ರಿಯಿಸುತ್ತಿದ್ದ 'ಹುಟ್ಟಾ ಹೋರಾಟಗಾರ' ವಾಟಾಳ್ ಎಲ್ಲಿ ಎಂದು ಕನ್ನಡದ ಜನತೆ ಕೇಳತೊಡಗಿದ್ದಾರೆ. ಬುಧವಾರ ಮಹಾರಾಷ್ಟ್ರದ ಕನ್ನಡ ವಿರೋಧಿ ಧೋರಣೆ ಪ್ರತಿಭಟನೆ ನಡೆಸಿದ್ದನ್ನು ಬಿಟ್ಟರೆ ವಾಟಾಳ್ ಇತ್ತೀಚಿನ ದಿನಗಳಲ್ಲಿ ಮೌನಕ್ಕೆ ಶರಣಾದಂತಿದೆ. ಅದರಲ್ಲೂ ಆಣೆ-ಪ್ರಮಾಣ ಪ್ರಹಸನದಲ್ಲಿ ಅವರೂ ವಿಜೃಂಭಿಸಬೇಕಿತ್ತು. id='are-slot-1' class='oiad oi-axt oiadv'> id='top-searched-articles'>ಹೇಳಿ,
ವಾಟಾಳ್ ಏಕೀ ಮೌನ? ಅಥವಾ ಕುಮಾರಸ್ವಾಮಿ, ಯಡಿಯೂರಪ್ಪ, ಶೋಭಾ ಕರಂದ್ಲಾಜೆ ತ್ರಿವಳಿಗಳ ಬಗ್ಗೆ ಪ್ರೀತಿ ಹೆಚ್ಚಾಯಿತೋ? ಇವರಿಂದ ಯಾವುದಾದರೂ ಪ್ರಲೋಭಕ್ಕೆ ಒಳಗಾದಿರೋ? ನಿಮ್ಮದೇ ಬ್ರ್ಯಾಂಡಿನ ಟೋಪಿಯನ್ನು ನೀವೇ ಹಾಕಿಕೊಂಡಿರೋ!? ಅಥವಾ ವಯಸಾಯಿತು, ಇದಾವುದರ ಗೊಡೆಯೂ ಬೇಡ ಎನ್ನುವಿರೋ!? ಹುಣಸೆಗೆ ಮುಪ್ಪೆ? ಎಂತೆಂಥ ಚಳುವಳಿಗಳನ್ನು ನೋಡಿಲ್ಲ, ಮಾಡಿಲ್ಲ ನೀವು? ಇದ್ಯಾವ ಮಹಾ! ಎದ್ದೇಳಿ ವಾಟಾಳ್ ... ನಿಮ್ಮಾಣೆ ಎದ್ದೇಳಿ...











Click it and Unblock the Notifications