ವೈದ್ಯಾಧಿಕಾರಿ ಹತ್ಯೆ ಆರೋಪಿ ಸಾವು: 5 ಜೈಲು ಸಿಬ್ಬಂದಿ ಅಮಾನತು

ಲಖ್ನೊ‌, ಜೂನ್ 23: ಮುಖ್ಯ ವೈದ್ಯಾಧಿಕಾರಿ (CMO) ಬಿ.ಪಿ. ಸಿಂಗ್ ಹತ್ಯೆಯ ಮುಖ್ಯ ಆರೋಪಿ ಹಾಗೂ ಉಪಮುಖ್ಯ ವೈದ್ಯಾಧಿಕಾರಿಯಾಗಿದ್ದ ಯೋಗೇಂದ್ರ ಸಿಂಗ್ ಸಾಚನ್ ನಿಗೂಢ ಸಾವಿಗೆ ಸಂಭಂಧಿಸಿದಂತೆ ಜೈಲರ್ ಮತ್ತು ಇತರೆ ನಾಲ್ಕು ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಸಾಚನ್ , ಉತ್ತರ ಪ್ರದೇಶದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ಲಖ್ನೊ ಜೈಲಿನ ಜೈಲರ್, ಉಪ ಜೈಲರ್, ಹೆಡ್ ಕಾನ್ಸ್ ಟೇಬಲ್ ಮತ್ತು ಇಬ್ಬರು ಗಾರ್ಡ್ ಗಳನ್ನು ಕರ್ತವ್ಯಲೋಪದಡಿ ತಕ್ಷಣದಿಂದ ಜಾರಿಗೆ ಬರುವಂತೆ ಜೂನ್ 22ರಂದು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಈ ಐದೂ ಸಿಬ್ಬಂದಿಯ ವಿರುದ್ಧ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.

ಲಖ್ನೊ ಜೈಲು ಸೂಪರಿಂಟೆಂಡೆಂಟ್ ಬಿಎಸ್ ಮುಕುಂದ್ ಹಾಗೂ ವೈದ್ಯ ವಿಪಿ ತ್ರಿಪಾಠಿ ಅವರ ಪ್ರಕಾರ ಬುಧವಾರ ರಾತ್ರಿ ಜಿಲ್ಲಾ ಕಾರಾಗೃಹದ ಶೌಚಾಲಯದಲ್ಲಿ ಸಾಚನ್ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದರು. ಘಟನೆ ಬಗ್ಗೆ ಸರಕಾರ ನ್ಯಾಯಾಂಗ ತನಿಖೆಗೆ ಆಜ್ಞಾಪಿಸಿತ್ತು. ಸಾಚನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆಯಾದರೂ ಶವಪರೀಕ್ಷೆ ವರದಿ ಇನ್ನೂ ಬಂದಿಲ್ಲ.

CMO (ಕುಟುಂಬ ಕಲ್ಯಾಣ) ಬಿ.ಪಿ. ಸಿಂಗ್ ಅವರ ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡ ವಿಶೇಷ ತನಿಖಾ ತಂಡ ಸಾಚನ್ ಸಿಂಗ್ ಹತ್ಯೆಯ ಪ್ರಧಾನ ಆರೋಪಿ ಎಂದು ಜೂನ್ 17ರಂದು ತಿಳಿಸಿತ್ತು. ವಾಯುವಿಹಾರ ಮಾಡುತ್ತಿದ್ದ ಸಿಂಗ್ ಅವರನ್ನು ಏಪ್ರಿಲ್ 2ರಂದು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು.

ಗಮನಾರ್ಹವೆಂದರೆ, ಉತ್ತರ ಪ್ರದೇಶದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಸಾಚನ್ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಪತ್ತೆಯಾಗಿತ್ತು. ಅದಕ್ಕೂ ಮುನ್ನ ಕಳೆದ ಅಕ್ಟೋಬರ್ ನಲ್ಲಿ ವಿನೋದ್ ಕುಮಾರ್ ಆರ್ಯ ಎಂಬ ಮತ್ತೊಬ್ಬ CMO (ಕುಟುಂಬ ಕಲ್ಯಾಣ) ಹತ್ಯೆ ಪ್ರಕರಣದಲ್ಲಿ ಸಾಚನ್ ಹೆಸರು ದಾಖಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+