ಕರವೇ ದಶಮಾನೋತ್ಸವ ನಿರ್ಣಯಗಳು ಯಾರಿಗೆ? ಏತಕ್ಕೆ?

ಕರವೇ ಸಪ್ತ ನಿರ್ಣಯಗಳು:
* ರಾಜ್ಯದಲ್ಲಿ ಕೇಂದ್ರ, ರಾಜ್ಯ ಮತ್ತು ಖಾಸಗಿ ವಲಯದಲ್ಲಿನ ಎಲ್ಲಾ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು.
* ಬಾಕಿ ನೀರಾವರಿ ಯೋಜನೆಗಳನ್ನು ಆದ್ಯತೆ ಮೇಲೆ ಪೂರ್ಣ ಮಾಡಬೇಕು.
* ಕೃಷ್ಣಾ, ಕಾವೇರಿ, ಗೋದಾವರಿ, ಮಹಾನದಿ ಪಾತ್ರದಲ್ಲಿ ಹಮ್ಮಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಬೇಕು.
* ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಡಾ.ನಂಜುಡಪ್ಪ ವರದಿಯನ್ನು ಜಾರಿಗೆ ತರಬೇಕು.
* ಅಂತಾರಾಜ್ಯ ಜಲವಿವಾದಾಗಳನ್ನು ಸೌಹಾರ್ದಯುತವಾಗಿ ಹಾಗೂ ಶಾಶ್ವತವಾಗಿ ಬಗೆಹರಿಸಲು ರಾಷ್ಟ್ರೀಯ ಜಲನೀತಿಯನ್ನು ತರಬೇಕು.
* ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆಯನ್ನು ಕೈ ಬಿಡಬೇಕು ಹಾಗೂ ತ್ರಿಭಾಷಾ ಸೂತ್ರ ನೀತಿಯನ್ನು ಕೇಂದ್ರ ಸರ್ಕಾರ ಕೂಡಲೇ ನಿಲ್ಲಿಸಬೇಕು.
* ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಹಕನಿಗೆ ಕನ್ನಡದಲ್ಲಿ ಸೇವೆ ಒದಗಿಸಲು ನಿರಾಕರಿಸುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಬೇಕೆಂದು ಒತ್ತಾಯಿಸುವ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಜಾಗತೀಕರಣ, ಉದಾರೀಕರಣ, ಆರ್ಥಿಕಕರಣಗಳ ನಡುವೆ ನಾವು ಅಂತಃಕರಣವನ್ನು ಕಳೆದುಕೊಳ್ಳುತ್ತಿದ್ದೇವೆ, ರಾಜ್ಯಕ್ಕೆ ಅನ್ಯಭಾಷಿಕರ ವಲಸೆ ಮಿತಿ ಮೀರುವುದರಿಂದ ಕನ್ನಡಿಗರಿಗೆ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡರು ಅಭಿಪ್ರಾಯಪಟ್ಟರು.
ಪಂಚಗವಿ ಮಠದ ಜಯಮೃತ್ಯುಂಜಯ ಸ್ವಾಮಿ, ನಿರ್ದೇಶಕ ದೊರೆ ಭಗವಾನ್, ಡಾ ನಲ್ಲೂರ್ ಪ್ರಸಾದ್, ಕೋಡಿ ಹಳ್ಳಿ ಚಂದ್ರಶೇಕರ್, ಪತ್ರಕರ್ತ ರಂಜಾನ್ ದರ್ಗಾ, ಬಿಎಲ್ ಶಂಕರ್, ಎಚ್ ಕೆ ಪಾಟೀಲ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.











Click it and Unblock the Notifications