ಶೋಭಾ ಆಣೆಗೂ ಅವಕಾಶ ನೀಡಿ ಕುಮಾರ ಸ್ವಾಮಿಗಳೇ!

shobha, yadiyurappa
ಬೆಂಗಳೂರು, ಜೂನ್ 22: ರಾಜಕೀಯಕ್ಕೆ ಬಂದು ಇನ್ನೂ ಹತ್ತು ವರ್ಷವೂ ಆಗದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು, ಕೊಡಗಿನಲ್ಲಿ 173 ಎಕರೆ ಕಾಫಿ ತೋಟವನ್ನು ಖರೀದಿಸಿರುವ ಬಗೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಕೆಲವು ತಿಂಗಳ ಹಿಂದೆ ಬಹಿರಂಗಪಡಿಸಿದ್ದನ್ನು ಜನರು ಮರೆತಿರಲಾರರು.

ಈ ಸತ್ಯ ಸಂಗತಿಗೆ ಹಾವು ತುಳಿದವರಂತೆ ಬೆಚ್ಚಿ ಬಿದ್ದ ಶೋಭಾ ಕರಂದ್ಲಾಜೆ ಅವರು ಸಾರ್ವಜನಿಕವಾಗಿ ಅಳುವುದೊಂದು ಬಾಕಿ ಇತ್ತು. ಬಿಡಿಎ ನಿವೇಶನ ಮಾರಾಟ ಮಾಡಿ ಮತ್ತು ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ ಹಣದಲ್ಲಿ ಕಾಫಿ ತೋಟ ಖರೀದಿಸಿದ್ದೇನೆ. ನಾನು ಅಕ್ರಮವಾಗಿ ಸಂಪಾದಿಸಿದ ಹಣವಲ್ಲ. ಈ ಬಗೆಗೆ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ಎದುರು ಪ್ರಮಾಣ ಮಾಡಲು ಸಿದ್ಧ. ಇದಕ್ಕೆ ಕುಮಾರಸ್ವಾಮಿ ಅವರೂ ಬರಲಿ' ಎಂದು ವಿನಂತಿಸಿಕೊಂಡಿದ್ದರು.

ಶೋಭಾ ಅವರ ಈ ಹರಕೆಯೂ ಬಾಕಿ ಇದೆ. ಹೇಗಿದ್ದರೂ ಶೋಭಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಣೆ-ಪ್ರಮಾಣ ಮಾಡುವ 27ರಂದು ಹಾಜರಿರುವುದು ಶತಃಸಿದ್ಧ. ಆದ್ದರಿಂದ ಕುಮಾರಸ್ವಾಮಿ ಅವರು ಅಂದೇ ಶೋಭಾ ಅವರ ಪ್ರಮಾಣ ಕಾರ್ಯವನ್ನು ಮುಗಿಸಿಬಿಟ್ಟರೆ ಒಳ್ಳೆಯದು'.

ಏಕೆಂದರೆ ಶೋಭಾ ಅವರ ಕಾಫಿ ತೋಟದ ಖರೀದಿ ಬಗೆಗೆ ನನ್ನಂತಹ ಸಾವಿರಾರು ಜನರ ತಲೆಯೊಳಗೆ ಬಗೆಹರಿಯದ ಹತ್ತಾರು ಅನುಮಾನಗಳು ಉಳಿದುಕೊಂಡಿವೆ. ಅವುಗಳನ್ನು ಬಗೆಹರಿಸಿ ಎಂದು ಶೋಭಾ ಮತ್ತು ಕುಮಾರಸ್ವಾಮಿ ಅವರಲ್ಲಿ ವಿನಂತಿಸುವೆ.
- ತೇಜಸ್ ಚಕ್ರವರ್ತಿ, ಮೈಸೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+