ಮಂಜುನಾಥನ ಮೇಲಾಣೆ: ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1

'ಹಲವಾರು ಪತ್ರಿಕೆಗಳು 'ಕರ್ನಾಟಕ ನಂಬರ್ 1 ಕರಪ್ಟ್ ಸ್ಟೇಟ್' ಎಂದು ವರದಿ ಪ್ರಕಟಿಸಿದ್ದವು. ಮಾಧ್ಯಮಗಳ ಈ ಸಮೀಕ್ಷೆ ಬಗ್ಗೆ ತಮಗೆ ಅಸಮಾಧಾನವಿತ್ತು. ಆದರೆ ಇಲ್ಲಿನ ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿದಾಗ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ನೂರಕ್ಕೆ ನೂರು ಸತ್ಯ ಅನಿಸುತ್ತಿದೆ' ಎಂದು ಮುಖ್ಯ ನ್ಯಾ.ಜೆ.ಎಸ್. ಖೇಹರ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
'ಗಣಿ ಗುತ್ತಿಗೆ ವಿಚಾರಕ್ಕೆ ಬಂದರೆ ಒಂದನ್ನೇ ಮೂರು ನಾಲ್ಕು ಜನರಿಗೆ ಗುತ್ತಿಗೆ ನೀಡಿ ಹಣ ವಸೂಲಿ ಮಾಡುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ. ಇನ್ನು, ಕಂದಾಯ ಇಲಾಖೆಗೆ ಬಂದರೆ ಒಂದೇ ಆಸ್ತಿಯನ್ನು ಮೂರ್ನಾಲ್ಕು ಮಂದಿಗೆ ಮಾರಾಟ ಮಾಡಿ ದಾಖಲೆಗಳನ್ನು ಕೊಡುವುದು ಸರ್ವೆಸಾಮಾನ್ಯ ಎಂಬಂತಾಗಿದೆ. ಈ ರಾಜ್ಯವನ್ನು ಬಿಟ್ಟರೆ ಬೇರೆಲ್ಲೂ ಈ ರೀತಿಯ ವ್ಯವಹಾರ ನಡೆಯುವುದಿಲ್ಲ. ಇದು ನನಗೆ ಬೇಸರ ತರಿಸಿದೆ' ಎಂದು ಸಿ.ಜೆ. ಕಿಡಿಕಿಡಿಯಾಗಿದ್ದಾರೆ.
ಕಾನೂನುಬಾಹಿರವಾಗಿ ಗುತ್ತಿಗೆ ನೀಡುವ ಹಾಗೂ ದಾಖಲೆಗಳನ್ನು ಬದಲಾಯಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ವಿಪರ್ಯಾಸವೇ ಸರಿ. ನ್ಯಾಯಾಲಯಕ್ಕೆ ಸಲ್ಲಿಸುವ ಪ್ರಮಾಣ ಪತ್ರಗಳು ಸುಳ್ಳಿನ ಕಂತೆಯಾಗಿರುತ್ತವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ರಾಜ್ಯವನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮೀಸಲು ಅರಣ್ಯ ಪ್ರದೇಶದಲ್ಲಿದ್ದ ಜಲ್ಲಿ ಕ್ರಷಿಂಗ್ ಘಟಕದ ಗುತ್ತಿಗೆಯನ್ನು ರದ್ದುಪಡಿಸುವ ಸಂಬಂಧ ಗಣಿ ಇಲಾಖೆ ಹಾಗೂ ಸರ್ಕಾರ ಸಲ್ಲಿಸಿರುವ ಪ್ರತ್ಯೇಕ ಪ್ರಮಾಣ ಪತ್ರದಲ್ಲಿ ತದ್ವಿರುದ್ದ ಮಾಹಿತಿ ನೀಡಿರುವುದು ಸಿ.ಜೆ. ಕೋಪಕ್ಕೆ ಕಾರಣವಾಗಿದೆ.












Click it and Unblock the Notifications