ಆ ಮಂಜುನಾಥ ಇಬ್ಬರಿಗೂ ಶಿಕ್ಷೆ ನೀಡಲಿ: ನ್ಯಾ. ಹೆಗ್ಡೆ
ಬೆಂಗಳೂರು,
ಜೂನ್ 21: 'ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ ಎಂದಿರುವ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳಿಬ್ಬರಿಗೂ ದೇವರು ಶಿಕ್ಷೆ ನೀಡಲಿ' ಎಂದು ಲೋಕಾಯುಕ್ತ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಆಶಿಸಿದ್ದಾರೆ. ಗಮನಾರ್ಹವೆಂದರೆ ಬಹುತೇಕ ಕನ್ನಡಿಗರ ಮನದಾಳದ ಮಾತನ್ನು ಆಡಿರುವ ನ್ಯಾಯಮೂರ್ತಿ ಹೆಗ್ಡೆ ಅವರು ಈ ಸಂದರ್ಭದಲ್ಲಿ ಇಬ್ಬರ ಹೆಸರನ್ನೂ ಪ್ರಸ್ತಾಪಿಸುವ ಗೋಜಿಗೆ ಹೋಗಲಿಲ್ಲ. id="toptextpromo">ಪತ್ರಕರ್ತರ
ಜತೆ ಮಾತನಾಡಿದ ಅವರು, ಇಂತಹ ಮಾತುಗಳಿಂದ ಮಂಜುನಾಥನ ಬಗೆಗೆ ಇರುವ ನಂಬಿಕೆ ದೂರವಾಗುತ್ತದೆ. ರಾಜಕೀಯವನ್ನು ಇಲ್ಲಿ ತರಬಾರದು. ಇದು ದೇವಸ್ಥಾನದಲ್ಲಿ ಇತ್ಯರ್ಥವಾಗುವ ವಿಷಯವಲ್ಲ. ಇದಕ್ಕೆ ವಿಚಾರಣಾ ಆಯೋಗವನ್ನು ನೇಮಕ ಮಾಡಬೇಕು ಎಂದು ಪ್ರತಿಪಾದಿಸಿದರು. ಈ ಮಧ್ಯೆ, ಇಂದು (ಜೂ. 21) ನಡೆಯುವ ಲೋಕಪಾಲ ಸಮಿತಿಯ ಅಂತಿಮ ಸಭೆಯಲ್ಲಿ ಪಾಲ್ಗೊಳ್ಳಲು ನ್ಯಾ. ಹೆಗ್ಡೆ ಅವರು ದೆಹಲಿಗೆ ತೆರಳಿದರು. id='are-slot-1' class='oiad oi-axt oiadv'> id='top-searched-articles'>ಇದೇ
ವೇಳೆ, ರಾಜಕಾರಣಿಗಳು ದೇವರ ಮುಂದೆ ಪ್ರಮಾಣ ಮಾಡುತ್ತಾರೆ ಎಂಬ ವಿಚಾರ ಕರ್ನಾಟಕಕ್ಕೆ ಬಂದ ಮೇಲೆಯೇ ಗೊತ್ತಾಗಿದ್ದು' ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಆಣೆ-ಪ್ರಮಾನ ಪ್ರಹಸನಕ್ಕೆ ಹೊಸ ರೂಪ ನೀಡಿದ್ದಾರೆ.











Click it and Unblock the Notifications