ಥತ್ ತೇರೆಕಿ! ಸತ್ತರೂ ರಾಜಕೀಯ, ಬದುಕಿದ್ದರೂ ರಾಜಕೀಯ

ಫ್ಲ್ಯಾಷ್ ಬ್ಯಾಕ್ : ಮೊನ್ನೆ ಮೈಸೂರಿನಲ್ಲಿ ಆನೆಗಳು ದಾಂಧಲೆ ಮಾಡಿದಾಗ ವ್ಯಕ್ತಿಯೊಬ್ಬರು ಮೃತಪಟ್ಟರು. ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಕ್ಷಣವೇ 5 ಲಕ್ಷ ರುಪಾಯಿ ಪರಿಹಾರ ಪ್ರಕಟಿಸಿದರು. ಆದರೆ ಇದೇ ಕುಮಾರಸ್ವಾಮಿಯವರು ವೀರಾವೇಶದಿಂದ ಮಾತನಾಡುತ್ತಾ 'ಯಡಿಯೂರಪ್ನೋರು ಸ್ವಜಾತಿ ಪ್ರೇಮ ಮೆರೆದಿದ್ದಾರೆ. ಮೃತ ರೇಣುಕಾಪ್ರಸಾದ್ ಮುಖ್ಯಮಂತ್ರಿಗಳ ಜಾತಿಬಾಂಧವರು. ಅದಕ್ಕೆ ತಕ್ಷಣ ಮನಕರಗಿ 5 ಲಕ್ಷ ಹಂಚಿದ್ದಾರೆ' ಎಂದೆಲ್ಲ ಗೊಣಗಿದ್ದರು.
ಇಡೀ ಕುಟುಂಬಕ್ಕೆ ಜೀವನಾಧಾರವಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಸತ್ತುಹೋದಾಗ ಆ ಕುಟುಂಬದ ಗತಿಯೇನಾಗಬೇಕು? ಎಂದೂ ಆಲೋಚಿಸದೆ ಕುಮಾರಸ್ವಾಮಿಯವರು ಕೇವಲ ಹೆಸರು ಕೇಳಿಯೇ (ರೇಣುಕಾಪ್ರಸಾದ್) ತಮ್ಮ ಎಂದಿನ ಶೈಲಿಯಲ್ಲಿ ಯಡಿಯೂರಪ್ಪ ವಿರುದ್ಧ ಮುಗಿಬಿದ್ದಿದ್ದರು. ಸಾವಿನ ಮನೆಯಲ್ಲೂ ಜಾತಿ ರಾಜಕಾರಣದ ಕಮಟು ವಾಸನೆ ಹರಡಿದ್ದರು.
ಇಂತಿಪ್ಪ ಕುಮಾರಸ್ವಾಮಿಯವರು ಈಗ ಸಂಸದರ ಭತ್ಯೆ ಹಣದಿಂದ ಬಡಮಕ್ಕಳಿಗೆ ಆರ್ಥಿಕ ನೆರವು ಪ್ರಕಟಿಸಿದ್ದಾರೆ. ಇದು ಸದುದ್ದೇಶವೇ. ಯಾರಿಗೂ ಇದರ ಬಗ್ಗೆ ಬೇಸರ ಇಲ್ಲ. ಆದರೆ ವೈದ್ಯಕೀಯ ವಿದ್ಯಾರ್ಥಿ ಹರೀಶ್ ಕುಮಾರ್ ಅವರು ಬೆಂಗಳೂರಿನ ಆಟೊ ಚಾಲಕ ಮಂಜೇಗೌಡರ ಪುತ್ರರು. ಅಲ್ಲಿಗೆ ಯಡಿಯೂರಪ್ಪನವರು ಕೇವಲ ಹೆಸರು ಕೇಳಿಯೇ ಜಾತಿ ರಾಜಕಾರಣ ಮಾಡುವಂತಿದ್ದರೆ ಕುಮಾರಸ್ವಾಮಿಯವರದ್ದೂ ಆ ಹಾದಿಯೇ ಅಲ್ಲವೇ !?












Click it and Unblock the Notifications