ಕರ್ನಾಟಕ ರಾಜಕೀಯಕ್ಕೆ ಧರ್ಮಸ್ಥಳ ಮಂಜುನಾಥನೇ ಗತಿ!

Trust test in Dharmasthala : BSY vs HDK
ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ರಾಜಕೀಯ ಕಡುವೈರಿ ಜೆಡಿಎಸ್ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ನಡುವಿನ ತಿಕ್ಕಾಟ ತಾರಕಕ್ಕೇರಿದೆ.

ಇದುವರೆಗೂ ಪತ್ರಿಕಾ ಹೇಳಿಕೆಗಳು, ನ್ಯಾಯಾಲಯದಲ್ಲಿ ವ್ಯಾಜ್ಯಗಳು, ಟಿವಿ ಸಂದರ್ಶನಗಳು, ಪ್ರತಿಭಟನಾ ಪ್ರದರ್ಶನಗಳಿಗೆ ಸೀಮಿತವಾಗಿದ್ದ ತಿಕ್ಕಾಟ ಇದೀಗ ದೇವರ ದಿವ್ಯ ಸನ್ನಿಧಾನ ತಲಪುತ್ತಿದೆ. ತಾವು ಶುದ್ಧ ಎಂದು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮುಂದೆ ಆಣೆ-ಪ್ರಮಾಣ ಮಾಡಲು ಯಡಿಯೂರಪ್ಪ ಸಿದ್ಧರಾಗಿದ್ದು ಅದಕ್ಕೆ ಕುಮಾರಸ್ವಾಮಿ ಅವರನ್ನೂ ಆಹ್ವಾನಿಸಿದ್ದಾರೆ.

ಮುಖ್ಯಮಂತ್ರಿಗಳ ಸವಾಲನ್ನು ಸ್ವೀಕರಿಸಿರುವ ಕುಮಾರ ಆಣೆ-ಪ್ರಮಾಣಕ್ಕೆ ದಿನಾಂಕವೂ ನಿಗದಿಯಾಗಿದೆ. ಇದೇ ಜೂನ್ 27ರಂದು ಸೋಮವಾರ ಧರ್ಮಸ್ಥಳದಲ್ಲಿ ಶೋ ಡೌನ್ ನಡೆಯಲು ವೇದಿಕೆ ಸಿದ್ಧವಾಗುತ್ತಿದೆ. ರಾಜಕೀಯ ದೊಂಬರಾಟ ದೇವರ ಮನೆ ಹೊಕ್ಕುತ್ತಿರುವ ವಿದ್ಯಮಾನಕ್ಕೆ ರಾಜ್ಯದ ಜನತೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಇದನ್ನು ಲೇವಡಿ ಮಾಡುತ್ತಿದ್ದರೆ, ಮಹಾಜನತೆಯ ಕುತೂಹಲ ಕ್ಷಣಕ್ಷಣಕ್ಕೂತೀವ್ರಗೊಳ್ಳುತ್ತಿದೆ.

ಬನ್ನಿ ಇಲ್ಲಿ ಏನಾಗುತ್ತಿದೆ, ಏನಾಗುತ್ತದೆ ನೋಡೋಣ. ದಟ್ಸ್ ಕನ್ನಡ ಓದುಗರು ಈ ಪುಟವನ್ನು ಬುಕ್ ಮಾರ್ಕ್ ಮಾಡಿಕೊಳ್ಳಲು ಆಹ್ವಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+