ಲೈಂಗಿಕ ದೌರ್ಜನ್ಯ : ಬೆಂಗಳೂರು ಪಾದ್ರಿ ಬಂಧನ

ಜಾಲಹಳ್ಳಿಯಲ್ಲಿರುವ ಬೆಥೆಲ್ ಚರ್ಚ್ ಮತ್ತು ಶಾಲೆಯಲ್ಲಿರುವ ಅಪ್ರಾಪ್ತ ವಯಸ್ಕ ಹುಡುಗಿಯರನ್ನು ಲೈಂಗಿಕವಾಗಿ ಶಾಂತರಾಜು ಬಳಸಿಕೊಳ್ಳುತ್ತಿದ್ದ ಎಂದು ಹೆಂಡತಿ ಆರೋಪಿಸಿದ್ದಾಳೆ. ಅಲ್ಲದೆ ಚರ್ಚ್ ಹಣವನ್ನು ಲೂಟಿ ಹೊಡೆಯುತ್ತಿದ್ದಾನೆ ಎಂದು ಆರೋಪಿಸಿದ್ದಳು.
ಕೆಲ ಯುವತಿಯರನ್ನು ಪಾದ್ರಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಇದಕ್ಕೂ ಮೊದಲು 18 ವರ್ಷದ ಯುವತಿಯೊಬ್ಬಳು ಆರೋಪಿಸಿದ್ದಳು. ಯುವತಿಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಅವರ ಅನುಮತಿಯಿಲ್ಲದೆ ಫೋಟೋ ತೆಗೆದು ಅಶ್ಲೀಲವಾಗಿ ತಿರುಚುತ್ತಿದ್ದ ವಿಕೃತ ಮನುಷ್ಯ ಎಂದು ಆರೋಪಿಸಿದ್ದಳು.
ಹದಿನಾರು ವರ್ಷದ ಹುಡುಗಿ ಈತನ ಕಾಮಕಾಂಡದಿಂದಾಗಿ ಗರ್ಭಪಾತ ಕೂಡ ಮಾಡಿಕೊಂಡಿದ್ದಳು ಎಂದು ಪ್ರಿಯಲತಾ ದೂರಿದ್ದಾಳೆ. ಇದನ್ನು ಪ್ರಶ್ನಿಸಿದಾಗ, ಯಾರಿಗಾದರೂ ತಿಳಿಸಿದರೆ ಮಕ್ಕಳು ಮತ್ತು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿಲಾಗಿದೆ.












Click it and Unblock the Notifications