ಅಪ್ಪಿತಪ್ಪಿಯೂ ಉಪವಾಸದ ಸಹವಾಸಕ್ಕೆ ಹೋಗಲಿಲ್ಲ

sharad yadav
ಭೋಪಾಲ್, ಜೂನ್ 17: ಉಪವಾಸ ಸತ್ಯಾಗ್ರಹಗಳಿಂದ ಸತ್ಯಾಗ್ರಹಿಗಳು ಮಾತ್ರ ಹಿರೋಗಳಾಗುತ್ತಾರೆ; ಉದ್ದೇಶ ಈಡೇರಲಾರದು ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರು ಲೇವಡಿ ಮಾಡಿದ್ದಾರೆ.

ಹೀಗಾಗಿಯೇ ಉಪವಾಸವನ್ನು ಪ್ರತಿಭಟನೆಯ ಅಸ್ತ್ರವನ್ನಾಗಿ ಬಳಸುವುದನ್ನು ಬಲವಾಗಿ ವಿರೋಧಿಸುತ್ತೇನೆ. ಇದೇ ಕಾರಣಕ್ಕಾಗಿ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ತಾವು ಎಂದಿಗೂ ಅಪ್ಪಿತಪ್ಪಿ ಉಪವಾಸ ಸತ್ಯಾಗ್ರಹದ ಸಹವಾಸಕ್ಕೆ ಹೋಗಲಿಲ್ಲ ಎಂದು ಯಾದವ್ ಗುರುವಾರ ತಿಳಿಸಿದರು.

ಸತ್ಯಾಗ್ರಹಗಳು ಜನರ ಗಮನ ಸೆಳೆಯಲು ಸಫಲವಾಗುತ್ತವೆ. ಆದರೆ, ಉದ್ದೇಶಗಳು ಮಾತ್ರ ನೇಪಥ್ಯಕ್ಕೆ ಸರಿಯುತ್ತವೆ. ಸತ್ಯಾಗ್ರಹಿಗಳು ಜನರ ಅನುಕಂಪ ಗಿಟ್ಟಿಸುತ್ತಾರೆ. ಸರ್ಕಾರ, ಆಡಳಿತ, ಮಾಧ್ಯಮ ಮತ್ತು ಸಾರ್ವಜನಿಕರು ಪ್ರಮುಖ ಸಮಸ್ಯೆ ಬಿಟ್ಟು ಸತ್ಯಾಗ್ರಹಿಗಳ ರಕ್ತದೊತ್ತಡ, ತೂಕ ಇಳಿಕೆಯ ಕುರಿತು ಚರ್ಚೆ ಆರಂಭಿಸುತ್ತಾರೆ ಎಂದು ಶರದ್ ಯಾದವ್ ವ್ಯಂಗ್ಯವಾಡಿದರು.

ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಹಾವಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಕಾಲಕ್ರಮೇಣ ದೇಶವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಶ್ವಾಸ ತಮಗಿದೆ. ಅಣ್ಣಾ ಹಜಾರೆ ಮತ್ತು ಬಾಬಾ ರಾಮ್‌ದೇವ್ ನಡೆಸಿದ ಉಪವಾಸ ಸತ್ಯಾಗ್ರಹಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧದ ಹೋರಾಟಕ್ಕೆ ಇಬ್ಬರೂ ಹೊಸ ಆಯಾಮ ಒದಗಿಸಿದ್ದಾರೆ ಎಂದಷ್ಟೇ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+