ಪತ್ನಿಯ ಅನೈತಿಕ ಸಂಬಂಧಕ್ಕೆ ರೋಸಿ ಟವರ್ ಏರಿದ ಪತಿರಾಯ
ಚಿಂತಾಮಣಿ,
ಜೂನ್ 17: ತನ್ನ ಪತ್ನಿ ಮತ್ತೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿರುವುದನ್ನು ಸಹಿಸದಾದ ಪತಿರಾಯ ಪಟ್ಟಣದ ನಟ್ಟನಡುವೆ ಇರುವ ಮೊಬೈಲ್ ಟವರ್ ಏರಿರುವ ಘಟನೆ ಶುಕ್ರವಾರ ಬೆಳಗ್ಗೆ ಇಲ್ಲಿನ ಬಾಗೇಪಲ್ಲಿ ಸರ್ಕಲ್ ಬಳಿ ನಡೆದಿದೆ. id="toptextpromo">ಪತ್ನಿ
ಶಾರದಾ ಪಟ್ಟಣದ ವಕೀಲ ರಾಜಾರಾಮ್ ಜತೆ ಕಾನೂನುಬಾಹಿರ ಸಂಬಂಧ ಹೊಂದಿದ್ದಾಳೆ ಎಂದು ಪಟ್ಟಣದ ಚಿನ್ನದ ವ್ಯಾಪಾರಿ ರಾಜಶೇಖರ್ ಶುಕ್ರವಾರ ಬೆಳ್ಳಂಬೆಳಗ್ಗೆಯೇ 70 ಅಡಿ ಎತ್ತರದ ಮೊಬೈಲ್ ಟವರ್ ಏರಿ ಇಡೀ ಊರಿಗೆ ಮನೆ ವಾರ್ತೆಯನ್ನು ತಲುಪಿಸುತ್ತಿದ್ದಾರೆ. ಶಾರದಾ-ರಾಜಶೇಖರ್ ಅವರದು 15 ವರ್ಷಗಳ ದಾಂಪತ್ಯ. ಶಾರದಾ ಅವರು ವಕೀಲ ವೃತ್ತಿಯಲ್ಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಷ್ಟೇ
ಅಲ್ಲ ತನಗೆ ಅನ್ಯಾಯವಾಗಿದೆಯೆಂದು ಆರೋಪಿಸಿ, ಟವರ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ್ದಾರೆ. ಆದರೆ ಪೊಲೀಸರು ಇನ್ನೂ ಸ್ಥಳಕ್ಕೆ ಧಾವಿಸಿಲ್ಲ.











Click it and Unblock the Notifications