ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೂ ಕೈ ಮುರಿದುಕೊಂಡಿದ್ದ ನಿತ್ಯಾನಂದರಿಗೆ ಶಸ್ತ್ರಚಿಕಿತ್ಸೆ

By Prasad
|
Google Oneindia Kannada News

Swamy Nithyananda undergoes surgery
ಬೆಂಗಳೂರು, ಜೂ. 16 : ಮಂಗಳವಾರ ಮುಂಜಾನೆಯ ಧ್ಯಾನದ ನಂತರ ಕುದುರೆ ಸವಾರಿ ಮಾಡುವಾಗ ಬಿದ್ದು ಎರಡೂ ಕೈಗಳನ್ನು ಮುರಿದುಕೊಂಡಿದ್ದ ಬಿಡದಿ ಧ್ಯಾನಪೀಠಂನ ಸ್ವಾಮಿ ನಿತ್ಯಾನಂದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಬುಧವಾರ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಿದ ಮೂಳೆ ತಜ್ಞ ಡಾ. ರಾಜ್ ಚಕ್ರವರ್ತಿ ಅವರ ಪ್ರಕಾರ, ನಿತ್ಯಾನಂದ ಅವರ ಎರಡೂ ಕೈಗಳಲ್ಲಿ ಮೂಳೆ ಮುರಿತ ಆಗಿತ್ತು ಮತ್ತು ಒಂದು ಕೈಯಲ್ಲಿ ಮೂಳೆ ಚರ್ಮವನ್ನು ತೂರಿಕೊಂಡು ಹೊರಗೆ ಬಂದಿತ್ತು. ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು.

ರಾಸಲೀಲೆ ಮತ್ತು ಅಕ್ರಮ ಆಸ್ತಿ ಹೊಂದಿದ ಪ್ರಕರಣಗಳಲ್ಲಿ ಬಂಧಿತರಾಗಿದ್ದ ನಿತ್ಯಾನಂದ ಅವರು ಜಾಮೀನಿನ ಮೇಲೆ ಹೊರಬಂದ ನಂತರ, ಕೋರ್ಟಿನ ಅನುಮತಿ ಪಡೆದು ಎಂದಿನಂತೆ ಬಿಡಿದ ಆಶ್ರಮದಲ್ಲಿ ಧ್ಯಾನ, ಯೋಗ ಶಿಬಿರಗಳನ್ನು ನಡೆಸುತ್ತಿದ್ದಾರೆ. ಮಂಗಳವಾರ ಕೂಡ ಧ್ಯಾನ ಶಿಬಿರ ನಡೆಸಿದ್ದರು.

ನಂತರ ಕುದುರೆ ಸವಾರಿ ಮಾಡುವಾಗ, ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಗಣವನ್ನು ನೋಡಿ ಕುದುರೆ ಹೌಹಾರಿದೆ. ಸವಾರಿ ಮಾಡಲು ಬಿಡದೆ ಥಡಿಯ ಮೇಲೆ ಕುಳಿತಿದ್ದ ಸ್ವಾಮಿಯನ್ನು ಎತ್ತಿ ಒಗೆದಿದೆ. ಬಿದ್ದ ರಭಸಕ್ಕೆ ನಿತ್ಯಾನಂದರ ಎರಡೂ ಕೈಗಳು ಮುರಿದಿದ್ದವು. ಗುರುವಾರ ಬೆಳಿಗ್ಗೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

English summary
Swamy Nithyananda of Bidadi Dhyanapeetham has undergone surgery to both his arms at Manipal hospital in Bangalore. Nithyananda had fallen from horse at the ashram after the morning meditation session on Tuesday, June 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X