• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನಾರ್ದನ ರೆಡ್ಡಿ ಹೆಲಿಕಾಪ್ಟರ್ ರುಕ್ಮಿಣಿ ನಾಪತ್ತೆ

By * ರೋಹಿಣಿ ಬಳ್ಳಾರಿ
|
ಬಳ್ಳಾರಿ, ಜೂ. 16 : ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ 'ರುಕ್ಮಿಣಿ" ಹೆಲಿಕಾಪ್ಟರ್ ಒಂದು ತಾಸುಕಾಲ ಮಾರ್ಗ ತಪ್ಪಿ ಸಿಗ್ನಲ್ ಪ್ರದೇಶದಿಂದ ಹೊರ ಹೋಗಿ ಆತಂಕ ಸೃಷ್ಟಿಯಾಗಿದ್ದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಜನಾರ್ದನ ರೆಡ್ಡಿ ಅವರು ಜಿಲ್ಲೆಯ ಹೂವಿನಹಡಗಲಿಯಲ್ಲಿ ಹಮ್ಮಿಕೊಂಡಿರುವ 'ನಿಮ್ಮೊಂದಿಗೆ ನಾವು" ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುರುವಾರ ಬೆಳಗ್ಗೆ 11.05ಕ್ಕೆ ಹವಂಭಾವಿಯ ಹೆಲಿಪ್ಯಾಡ್‌ನಿಂದ ಟೇಕಾಫ್ ಆಗಿದ್ದರು. ರುಕ್ಮಿಣಿ 11.35ರ ವೇಳೆಗೆ ಹೂವಿನಹಡಗಲಿಯಲ್ಲಿ ಲ್ಯಾಂಡ್ ಆಗಬೇಕಿತ್ತು.

ಆದರೆ, ಹೆಲಿಕಾಪ್ಟರ್ ವಾಯು ಮಾರ್ಗದಲ್ಲಿ ಹೊಸಪೇಟೆ ಸಮೀಪಿಸುತ್ತಿದ್ದಂತೆಯೇ ಏಕಾಏಕಿ ಸಿಗ್ನಲ್ ಪ್ರದೇಶದಿಂದ ಹೊರಕ್ಕೆ ತೆರಳಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಆಗಮನಕ್ಕಾಗಿ ಹೂವಿನಹಡಗಲಿಯಲ್ಲಿ ಕಾಯುತ್ತಿದ್ದ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಚಂದ್ರಗುಪ್ತ ಸೇರಿ ಎಲ್ಲಾ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಯಿತು.

ಇದೇ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರ ಮನೆಯಲ್ಲೂ ಕೂಡ ಕೆಲ ಹೊತ್ತು ಗೊಂದಲ ನಿರ್ಮಾಣವಾಗಿ, ಅನೇಕರು ಮೌನಕ್ಕೆ ಶರಣಾಗಿದ್ದರು. ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣ ಅವರು ಸಚಿವರನ್ನು ಸಂಪರ್ಕಿಸಲು ನಿರಂತರ ಪ್ರಯತ್ನದಲ್ಲಿದ್ದರು. ಆದರೆ, ತೀವ್ರ ಒತ್ತಡಕ್ಕೆ ಒಳಗಾಗಿದ್ದ ಅವರು ದೇವರ ಮೊರೆ ಹೋಗಿದ್ದರು ಎನ್ನಲಾಗಿದೆ.

ಸುಮಾರು 12.35ರ ಸುಮಾರಿಗೆ ಹೆಲಿಕಾಪ್ಟರ್ ಹೂವಿನಹಡಗಲಿಯ ಆಗಸದಲ್ಲಿ ಹಾರಾಡುತ್ತಿದ್ದನ್ನು ಕಾಣಿಸಿದ ಎಲ್ಲರೂ ಹರ್ಷ ವ್ಯಕ್ತಪಡಿಸಿ, ಮುಗುಳ್ನಕ್ಕು ಪರಸ್ಪರ ಸಂಭ್ರಮಿಸಿದರು. ಅಲ್ಲದೇ, ಮೂಡಿದ್ದ ಆತಂಕ ಮರೆಯಾಗಿದ್ದಕ್ಕೆ ದೇವರಿಗೆ ಇದ್ದಲ್ಲಿಂದಲೇ ನಮಿಸಿ, ಭಕ್ತಿ ಸಮರ್ಪಿಸಿದರು. ಹೆಲಿಕಾಪ್ಟರ್‌ನಲ್ಲಿ ರೆಡ್ಡಿ ಅವರ ಜೊತೆಯಲ್ಲಿ ಸಂಸದೆ ಜೆ. ಶಾಂತ, ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಅವರಿದ್ದರು.

ಇತ್ತ ಅವರ ಅಭಿಮಾನಿಗಳು, ಬಂಧುವರ್ಗ ಮತ್ತು ಕುಟುಂಬದ ಸದಸ್ಯರಲ್ಲಿ ನಗು ಮೂಡಿ, ಸಂಭ್ರಮಿಸುವಂತಾಯಿತು. ಇಷ್ಟಕ್ಕೂ ಈ ಸಮಸ್ಯೆಗೆ ಪೊಲೀಸ್ ಇಲಾಖೆ ನೀಡುವ ಕಾರಣ 'ಪೈಲೆಟ್ ಹೊಸಬ ಆಗಿರುವ ಕಾರಣ ಈ ಸಮಸ್ಯೆ ಕಾಣಿಸಿಕೊಂಡಿದೆ. ಅನಾಹುತ ಏನೂ ನಡೆದಿಲ್ಲ ಬಿಡಿ. ದೇವರು ದೊಡ್ಡವನಿದ್ದಾನೆ" ಎಂದು ನಿಟ್ಟಿಸಿರುಡುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bellary district in-charge minister Gali Janardhana Reddy's helicopter Rukmini went missing near Hoovinahadagali on Thursday, June 16. The problem occured as the pilots were young and inexperienced, said police. Thank God, it was traced an hour later.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more