ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರನಾಥ ಯಾತ್ರೆ ವಿವಾದ: ಪೂಜೆ ಸಂಪ್ರದಾಯಕ್ಕೆ ಭಂಗ

By Srinath
|
Google Oneindia Kannada News

Amarnath Yatra
ಜಮ್ಮು, ಜೂನ್ 16: ಸುಮಾರು 150 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮರನಾಥ ಯಾತ್ರೆಯ ಮೊದಲ ಪೂಜೆಯನ್ನು ಭಕ್ತರು ಹಿಮಲಿಂಗಕ್ಕೆ ಸಲ್ಲಿಸದೆ ಅಲ್ಲಿಂದ 6 ಕಿ.ಮೀ. ದೂರದಲ್ಲಿರುವ ಪಂಜ್‌ತರಣಿ ಜಾಗದಲ್ಲಿ ಸಲ್ಲಿಸಿದ್ದಾರೆ. ಜಮ್ಮು ಕಾಶ್ಮೀರ ಸರ್ಕಾರ ಹಾಗೂ ಹಿಂದು ಭಕ್ತರ ನಡುವಿನ ಭಿನ್ನಮತದಿಂದಾಗಿ ಈ ಬಾರಿಯ ಅಮರನಾಥ ಯಾತ್ರೆ ಬುಧವಾರ ಇಂತಹ ವಿಚಿತ್ರ ಆರಂಭ ಪಡೆದಿದೆ.

ಹಿಮಾಲಯದ ದುರ್ಗಮ ಗುಹೆಯಲ್ಲಿ ಜೂನ್‌ ವೇಳೆಗೆ ಉದ್ಭವವಾಗುವ ನೈಸರ್ಗಿಕ ಹಿಮಲಿಂಗಕ್ಕೆ ಭಕ್ತರು ಪೂಜೆ ಸಲ್ಲಿಸುವುದು ಪರಂಪರಾಗತ. ಆದರೆ ಈ ಬಾರಿ ಜೂನ್‌ 29ರಿಂದ ಯಾತ್ರೆ ಆರಂಭಿಸಿ ಎಂದು ಶ್ರೀ ಅಮರನಾಥ ಯಾತ್ರಾ ಮಂಡಳಿಯು ಭಕ್ತರಿಗೆ ಸೂಚಿಸಿತ್ತು. ಆದರೆ ಭಕ್ತರು ಜೂನ್‌ 15ರಿಂದಲೇ ಯಾತ್ರೆ ಆರಂಭಿಸುತ್ತೇವೆಂದು ಪಟ್ಟು ಹಿಡಿದಿದ್ದರು. ಅದರಂತೆ 4 ಮಂದಿ ಹೆಲಿಕಾಪ್ಟರ್ ನಲ್ಲಿ ಹೋಗಿ ಹಿಮಲಿಂಗಕ್ಕೆ ಪೂಜೆ ಸಲ್ಲಿಸುವ ಒಪ್ಪಂದಕ್ಕೆ ಬರಲಾಗಿತ್ತು.

ಆದರೆ ಬುಧವಾರ ಈ ಒಪ್ಪಂದ ಕೈಗೂಡಲಿಲ್ಲ. ಮೂಲ ಸ್ಥಳದಿಂದ 6 ಕಿ.ಮೀ. ದೂರವಿರುವ ಅನಂತನಾಗ ಜಿಲ್ಲೆಯ ಪಂಜ್‌ತರಣಿ ಎಂಬಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಹಿಂದು ಪುರಾಣದ ಪ್ರಕಾರ ಅಮರನಾಥದ ಗುಹೆಯಲ್ಲಿ ಕುಳಿತು ಈಶ್ವರನು ಪಾರ್ವತಿಗೆ ಅಮರತ್ವವನ್ನು ಬೋಧಿಸಿದ ಎನ್ನಲಾಗುತ್ತದೆ. ಪ್ರತಿವರ್ಷ ಇಲ್ಲಿಗೆ ಸಾವಿರಾರು ಭಕ್ತರು ಜಾರುವ ಹಿಮದ ಮಧ್ಯೆ ಕಾಲ್ನಡಿಗೆಯಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ. 2005ರಿಂದ ಪ್ರತಿವರ್ಷ 2 ತಿಂಗಳ ಕಾಲ ಪೂಜೆಗೆ ಅವಕಾಶ ನೀಡುತ್ತಿದ್ದ ಸರ್ಕಾರ ಈ ಬಾರಿ ಅದನ್ನು 46 ದಿನಗಳಿಗೆ ಇಳಿಸಿದೆ.

English summary
It was for the first time that the Pratham Pooja was not held at the cave shrine. Amidst the Amarnath Yatra crisis Hindu rights activists offered the first prayers near Panjtarni, six kilometres from the cave shrine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X