ಗಮನಿಸಿ: ಕೊಂಕಣ ರೈಲು ವೇಳಾಪಟ್ಟಿ ಬದಲಾಗಿದೆ
ಮುಂಗಾರು
ಮಳೆಯಲ್ಲಿನ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಕೊಂಕಣ ರೈಲ್ವೆ ತನ್ನ ರೈಲು ವೇಳಾಪಟ್ಟಿಯನ್ನು ಬದಲಾಯಿಸಿದೆ. ನೂತನ ವೇಳಾಪಟ್ಟಿ ಅಕ್ಟೋಬರ್ 31ರವರೆಗೆ ಮುಂದುವರೆಯಲಿದೆ. ಹೊಸ ವೇಳಾಪಟ್ಟಿಯನ್ನು ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷರು ಪ್ರಕಟಿಸಿದ್ದಾರೆ. id="toptextpromo">ಜೂನ್
ಹತ್ತರಿಂದ ಅನ್ವಯವಾಗುವಂತೆ ತೊಕ್ಕೂರು ಮತ್ತು ದಿವಾ ಸ್ಟೇಷನ್ ನಡುವಿನ ರೈಲ್ವೆ ಸಮಯ ಬದಲಾಗಲಿದೆ. ಮತ್ಸ್ಯಗಂಧ ಎಕ್ಸ್ ಪ್ರೆಸ್(ಟ್ರೈನ್ ನಂ. 12620) ಇನ್ನು ಮುಂದೆ ಮಂಗಳೂರಿನಿಂದ ಅಪರಾಹ್ನ 12.50ಕ್ಕೆ ಹೊರಡಲಿದೆ. ಈ ಮೊದಲು ಇದು ಮಧ್ಯಾಹ್ನ 2.40ಕ್ಕೆ ಹೊರಡುತ್ತಿತ್ತು. ಇನ್ನು ಮುಂದೆ ಈ ರೈಲು ಉಡುಪಿಯಿಂದ ಅಪರಾಹ್ನ 2.22 ಗಂಟೆ(ಎರಡು ನಿಮಿಷ ನಿಂತು)ಗೆ ಹೊರಡಲಿದೆ. id='are-slot-1' class='oiad oi-axt oiadv'> id='top-searched-articles'>ಕ್ರಮಾಂಕ
12619 ರೈಲು ಮಂಗಳೂರಿಗೆ ಬೆಳಗ್ಗೆ 10.15 ಗಂಟೆಗೆ ತಲುಪಲಿದೆ. ಈ ಹಿಂದೆ ಇದು ಮುಂಜಾನೆ 7.30 ಗಂಟೆಗೆ ತಲುಪುತ್ತಿತ್ತು. ಮಡಗಾಂವ್-ಮಂಗಳೂರು ಪ್ರಯಾಣಿಕ ರೈಲು(ಡೈಲಿ ಟ್ರೈನ್ ನಂಬರ್: 56641) ಮಂಗಳೂರು ಸೆಂಟ್ರಲ್ ಸ್ಟೇಷನ್ ಗೆ ರಾತ್ರಿ ಹತ್ತು ಗಂಟೆಗೆ ತಲುಪಲಿದೆ. ಇದು ಈ ಮೊದಲು ರಾತ್ರಿ 8.55 ನಿಮಿಷಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ಗೆ ತಲುಪುತ್ತಿತ್ತು.











Click it and Unblock the Notifications