ವಿಮಾನ ನಿಲ್ದಾಣದಲ್ಲಿದ್ದ 15 ಕೋಟಿ ರು. ರತ್ನಾಭರಣ ಏನಾಯಿತು?
ಮುಂಬೈ,
ಜೂನ್ 13: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಟ್ರಾಂಗ್ ರೋಮಿನಲ್ಲಿಟ್ಟಿದ್ದ ಕೋಟ್ಯಂತರ ರುಪಾಯಿ ಮೌಲ್ಯದ ರತ್ನಾಭರಣಗಳು ಕಳುವಾಗಿವೆ. ಇದಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳೇ ಕಾರಣ ಎಂದು ಸುಂಕದ ಅಧಿಕಾರಿಗಳು ಹೇಳುತ್ತಿದ್ದಾರಾದರೂ ನಿಲ್ದಾಣದ ಅಧಿಕಾರಿಗಳು ಇದನ್ನು ಒಪ್ಪುತ್ತಿಲ್ಲ. id="toptextpromo">ಏನಾಯಿತೆಂದರೆ,
ಒಂದು ವಾರದ ಹಿಂದೆ ಮುಂಬೈನ ಸೂಪರ್ ಜೆಮ್ಸ್ ಅಂಡ್ ಜ್ಯೂವೆಲ್ಸ್ ಕಂಪನಿ 15 ಕೋಟಿ ರುಪಾಯಿ ಮೌಲ್ಯದ ರತ್ನಾಭರಣ ಸರಕನ್ನು ವಿ. ನಿಲ್ದಾಣಕ್ಕೆ ಕಳಿಸಿಕೊಟ್ಟಿತ್ತು. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ತಪಾಸಣಾ ಕೇಂದ್ರಕ್ಕೆ ಈ ಸರಕನ್ನು ಕಳಿಸಬೇಕಿತ್ತು. ಆದರೆ ಸಹಾರಾ ಬಳಿಯಿರುವ ಕಾರ್ಗೊ ಟರ್ಮಿನಲ್ ನಿಂದ ಇದಿಷ್ಟೂ ರತ್ನಾಭರಣ ಈಗ ನಾಪತ್ತೆಯಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಸರಕನ್ನು ನಾಲ್ಕು ಪ್ಯಾಕೆಟ್ ಗಳಲ್ಲಿ ಕಳಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಸರಕಿನ ಜತೆ ಹೋಗಬೇಕಾದ ಅಧಿಕಾರಿಯೊಬ್ಬರು ಗೈರುಹಾಜರಾದ ಕಾರಣ ಸರಕನ್ನು ನಿಲ್ದಾಣದ ಸ್ಟ್ರಾಂಗ್ ರೋಮಿನಲ್ಲಿ ಇಡಬೇಕಾಯಿತು. ಆದರೆ ಮಾರನೆಯ ದಿನ ಈ ಪ್ಯಾಕೆಟ್ ಗಳನ್ನು ತೆರೆದು ನೋಡಿದಾಗ ಒಂದು ಕೋಟಿ ರು. ಮೌಲ್ಯದ ಒಂದಷ್ಟು ಹರಳುಗಳು ಕಣ್ಮರೆಯಾಗಿದ್ದವು ಎಂದು ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.











Click it and Unblock the Notifications