ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಟ್ರೋ ಜತೆ ಬೀದಿ ಬಿಂಬ ರಂಗದ ತುಂಬ

By Mahesh
|
Google Oneindia Kannada News

Beedi Bimba Rangada Tumba Play
ಬೆಂಗಳೂರು ಜೂ 13: ಈ ವಾರ ಹೇಗಾದರೂ ಬಿಡುವು ಮಾಡಿಕೊಂಡು ಈ ಎರಡು ನಾಟಕ ನೋಡಿ ಬಿಡಿ. ಬೆಂಗಳೂರಿನ ಹೊಸ ರಂಗವೇದಿಕೆಯಾಗಿ ರೂಪುಗೊಳ್ಳುತ್ತಿರುವ ಹನುಮಂತನಗರದ ಕೆಎಚ್ ಕಲಾಸೌಧದಲ್ಲಿ ಯುವ ಪ್ರತಿಭೆಗಳು ನಿಮ್ಮನ್ನು ರಂಜಿಸಲು ಸಿದ್ಧರಾಗಿದ್ದಾರೆ. ಬೀದಿ ಬಿಂಬ ರಂಗದ ತುಂಬ ರಾಜಕೀಯ ವಿಡಂಬನೆ ಸಾಮಾಜಿಕ ಕಳಕಳಿ ಕಥೆ ಹೊಂದಿದ್ದರೆ, ಮೆಟ್ರೋ ನಗರ ಕೇಂದ್ರೀತ ಜೀವನ ಶೈಲಿಯ ಚಿತ್ರಣ ನೀಡುತ್ತದೆ. ಯುವ ತಂಡಗಳು ಪ್ರದರ್ಶನ ನೀಡುತ್ತಿರುವ ಈ ಎರಡು ನಾಟಕಗಳು ಸ್ವಮೇಕ್ ಎಂಬುದು ವಿಶೇಷ.

ನಾಟಕ ರಂಗದಲ್ಲೂ ಸ್ವಮೇಕ್, ರಿಮೇಕ್ ಎಂಬುದು ಇದೆಯೇ? ಉತ್ತರ ಬೇಕಾದರೆ ಅಳಿವಿನಂಚಿನಲ್ಲಿರುವ ನಾಟಕರಂಗಕ್ಕೆ ಒಂದಿಷ್ಟು ಸ್ವಂತಿಕೆ ಟಾನಿಕ್ ಕುಡಿಸಿ ಎಬ್ಬಿಸ ಹೊರಟಿರುವ ಈ ಯುವ ತಂಡಗಳ ನಾಟಕಗಳನ್ನು ನೋಡಲೇ ಬೇಕು. ನಾಟಕಗಳ ವಿವರ ಇಲ್ಲಿದೆ

ನಾಟಕದ ಹೆಸರು: ಬೀದಿ ಬಿಂಬ ರಂಗದ ತುಂಬ
ತಂಡ : ಜನಗಣ, ವಂದೇ ಮಾತರಂ ಟ್ರಸ್ಟ್
ಸಮಯ/ ದಿನಾಂಕ : ಸಂಜೆ 7 ರಿಂದ 8.30, ಜೂ 16
ನಿರ್ದೇಶನ: ಪವನ್ ಪ್ರಸಾದ್ ಶರ್ಮ
ಸ್ಥಳ: ಕೆಎಚ್ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ, ಬೆಂಗಳೂರು
ಟಿಕೆಟ್ : 97429 25978, 99010 00833

ನಾಟಕದ ತಿರುಳು: ಅಳಿಯುತ್ತಿರುವ ಬೀದಿ ನಾಟಕ ಹಾಗೂ ಸ್ವಮೇಕ್ ನಾಟಕ ಸಂಸ್ಕೃತಿಯನ್ನು ಉಳಿಸಲು ಮುಂದಾಗುವ ನಾಯಕ, ವ್ಯವಸ್ಥೆಯನ್ನು ದೂಷಿಸುತ್ತಾ ನಾಟಕದ ಮೂಲಕ ಜನರನ್ನು ಎಚ್ಚರಿಸಲು ಯೋಜಿಸುತ್ತಾನೆ. ರಾಜಕಾರಣಿಗಳು ಮಾಧ್ಯಮಗಳನ್ನು ಎದುರು ಹಾಕಿಕೊಳ್ಳುತ್ತಾನೆ. ಕೊನೆಗೆ ಹೇಗೆ ವ್ಯವಸ್ಥೆ ನಾಯಕ ಕಟ್ಟಿ ಬೆಳೆಸಲು ಯತ್ನಿಸಿದ ನಾಟಕ ತಂಡ ಹಾಗೂ ಯುವ ಜನಾಂಗವನ್ನು ತುಳಿಯಲು ಯತ್ನಿಸುತ್ತದೆ ಎಂಬುದನ್ನು ಪಂಚಿಂಗ್ ಡೈಲಾಗ್ ಹಾಗೂ ಸ್ಕ್ರಿಪ್ಟ್ ಮೂಲಕ ತೋರಿಸಲಾಗಿದೆ.
****
ನಾಟಕದ ಹೆಸರು : ನಮ್ಮ ಮೆಟ್ರೋ
ತಂಡ : We Move, ಬೆಂಗಳೂರು
ಸಮಯ/ ದಿನಾಂಕ : ಸಂಜೆ 7.30 ರಿಂದ 8.30, ಜೂನ್ 18
ನಿರ್ದೇಶನ: ಅಭಿಷೇಕ್ ಐಯಂಗಾರ್, ವಿ ಮೂವ್ ತಂಡ
ಸ್ಥಳ: ಕೆಎಚ್ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ, ಬೆಂಗಳೂರು
ಟಿಕೆಟ್ ಗಾಗಿ : 98860 62324
ವೆಬ್: http://www.indianstage.in/

ನಾಟಕದ ತಿರುಳು: ಸರ್ಕಾರ ಮೆಟ್ರೋ ರೈಲು ಓಡಿಸುವ ಮೊದಲು ರಂಗವೇದಿಕೆ ಮೇಲೆ ಮೇಟ್ರೋ ಓಡಿಸಿದ ಕೀರ್ತಿ ವಿ ಮೂವ್ ತಂಡಕ್ಕೆ ಸೇರುತ್ತದೆ. ಪುಣೆ, ಚೆನ್ನೈ ನಲ್ಲಿ ಮೆಟ್ರೋ ನಾಟಕ ಪ್ರದರ್ಶನ ನಂತರ ಬೆಂಗಳೂರಿನಲ್ಲಿ ಮೊದಲ ಪ್ರದರ್ಶನ. ಗಾರ್ಡನ್ ಸಿಟಿ, ಎಲೆಕ್ಟ್ರಾನಿಕ್ ಸಿಟಿ ಆಗಿ ಐಟಿ ಸಿಟಿಯಾಗಿ ವೇಗದ ಜೀವನ ಶೈಲಿಗೆ ಹೊಂದಿಕೊಂಡು ಹೇಗೆ ಸಾಗುತ್ತಿದೆ ಎಂಬುದು ನಾಟಕದ ಕಥಾ ವಸ್ತು. ಸಾಫ್ಟ್ ವೇರ್ ಇಂಜಿನಿಯರ್, ಕ್ಲರ್ಕ್, ವೃದ್ಧ ಹಾಗೂ ಬೀದಿ ಬದಿ ವ್ಯಾಪಾರಿಗಳ ಕಣ್ಣಲ್ಲಿ ಬೆಂಗಳೂರಿನ ಚಿತ್ರಣ ಹೇಗೆ ಕಾಣುತ್ತದೆ ನೋಡಲೇಬೇಕು.

English summary
Vandematharam trust, ‘janagana’ National confederation for theater presents ’Beedi Bimba Rangada Tumba' Play directed by young artist Pavan Prasad Sharma and We Move team is staging 'Metro play' don't miss both dramas at KH Kala Soudha, Hanumantha Nagar this week(Jun 12-19)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X