ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿಯಿಂದ ಯುಎಸ್ ಸಾರಿಗೆಗೆ ಸ್ಪರ್ಧೆ: ಅಶೋಕ್

By Mahesh
|
Google Oneindia Kannada News

BMTC to compete with US transport : R Ashok
ಬೆಂಗಳೂರು ಜೂ 12: ಸಾರಿಗೆ ಸಚಿವ ಆರ್ ಅಶೋಕ್ ಅವರು ಏನೋ ಜೋಶ್ ನಲ್ಲಿ ಬಿಎಂಟಿಸಿ ಇನ್ಮುಂದೆ ಅಮೆರಿಕಾ ಮುಂತಾದ ಮುಂದುವರೆದ ರಾಷ್ಟ್ರಗಳ ಸಾರಿಗೆ ಸಂಸ್ಥೆಗಳಿಗೆ ಸ್ಪರ್ಧೆ ನೀಡಲಿದೆ ಎಂದು ಘೋಷಿಸಿದರು. ಆದರೆ, ಸ್ವಲ್ಪ ಸಮಯದಲ್ಲೇ ಖಾಸಗಿ ವಾಹಿನಿಯಲ್ಲಿ ಬಿಎಂಟಿಸಿಯ ಹೈಟೆಕ್ ಬಸ್ ಗಳಲ್ಲಿ ಕಳಪೆ ಗಾಜು ಬಳಕೆ, ಪ್ರಯಾಣಿಕರೇ ಹುಷಾರ್ ಎಂಬ ಸುದ್ದಿ ಪ್ರಸಾರವಾಗುತ್ತಿತ್ತು.

ಇಂದಲ್ಲಾ ಅಂದ್ರೆ ನಾಳೆ ಅಥವಾ ಯಾವತ್ತಾದರೂ ಬಸ್ ಗಳಲ್ಲಿ ಚಿಲ್ಲರೆ ಸಮಸ್ಯೆ ಬಗೆಹರಿಸಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಸಾಹೇಬ್ರು, ಕಾಮನ್ ಮೊಬಿಲಿಟಿ ಕಾರ್ಡ್ ವಿಧಾನ ಜಾರಿಗೆ ತರಲಾಗುವುದು. ಹಣವಿಟ್ಟುಕೊಳ್ಳದೆ ಪ್ರೀಪೇಯ್ಡ್ ಕಾರ್ಡ್ ಬಳಸಿ ಪ್ರಯಾಣ ಬೆಳಸಬಹುದು ಎಂದು ಸಚಿವರು ಹೇಳಿದರು. ಆದರೆ, ಇದು ಜಾರಿಗೆ ಬರಲು ಕನಿಷ್ಠ ಒಂದು ವರ್ಷವಾದರೂ ಬೇಕು.

ಬಿಎಂಟಿಸಿ ಇಸ್ ಹೈಟೆಕ್ : ಈಗಾಗಲೇ ವಾಯುವಜ್ರ ಬಸ್ ಗಳಲ್ಲಿ ಉಚಿತ ಇಂಟರ್ ನೆಟ್ ವ್ಯವಸ್ಥೆ, ನಗರ ಸಾರಿಗೆ ಬಸ್ ಗಳಲ್ಲಿ ವಾಯ್ಸ್ ಅನೌನ್ಸ್ ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಪ್ರಮುಖ ಮಾರ್ಗಗಳ ಬಸ್ ಗಳಿಗೆ ಜಿಪಿಎಸ್ ಅಳವಡಿಕೆ ಜಾರಿಯಲ್ಲಿದೆ. ನಮ್ಮ ಸೌಲಭ್ಯಗಳು ಮುಂದುವರಿದ ರಾಷ್ಟ್ರಗಳಲ್ಲಿ ಸಿಗುವ ಸೌಲಭ್ಯದಂತೆ ಇರುತ್ತದೆ.ಕಡಿಮೆ ದರದಲ್ಲಿ ವೋಲ್ವೋ, ಬೆಂಜ್ ಬಸ್ ಗಳಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಸಾಧನೆ ಬಿಎಂಟಿಸಿ ಹೆಸರಿನಲ್ಲಿದೆ. ಎಂದು ಅಶೋಕ್ ಹೇಳಿದರು.

32 ಕೋಟಿ ರು. ವೆಚ್ಚದ ಬನಶಂಕರಿ ಬಸ್ ನಿಲ್ದಾಣ ಮುಂದಿನ ತಿಂಗಳು ಉದ್ಘಾಟನೆಯಾಗಲಿದೆ. ಇಂದು ಇಸ್ರೋ ಲೇಔಟ್ ನಲ್ಲಿ ಶಂಕುಸ್ಥಾಪನೆಗೊಂಡ 10 ಕೋಟಿ ರು ವೆಚ್ಚದ ಹೈಟೆಕ್ ಬಸ್ ನಿಲ್ದಾಣ ಮುಂದಿನ ವರ್ಷದೊಳಗೆ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎಂದು ಅಶೋಕ್ ತಿಳಿಸಿದರು.

English summary
Bangalore Metro Transport Corporation is likely to compete with US and other country by giving hi tech facility to commuters. No more currency change problem for bus conductors, soon BMTC will introduce Mobility Cards said Karnataka Transport Minister R Ashok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X