ಬಾಬಾ ಉಪವಾಸ ಸತ್ಯಾಗ್ರಹ ದೊಡ್ಡ ಷಡ್ಯಂತ್ರ :ಲಾಲೂ

Lalu Prasad Yadav on Baba Ramdev
ನವದೆಹಲಿ, ಜೂ 12: ಬಾಬಾ ರಾಮ್‌ದೇವ್‌ರ ಅನಾರೋಗ್ಯಕ್ಕೆ ಉಪವಾಸ ಕಾರಣವಲ್ಲ. ಅವರ ಪ್ರತಿಷ್ಠಾನಗಳ ಆರ್ಥಿಕ ವ್ಯವಹಾರ ತನಿಖೆ ಹಾಗೂ ಇತರ ವಿಚಾರಗಳು ಅದಕ್ಕೆ ಕಾರಣವೆಂದು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಟೀಕಿಸಿದ್ದಾರೆ. ರಾಮ್‌ದೇವ್ ಯೋಗಿಯೂ ಅಥವಾ ಬಾಬಾ ಅಲ್ಲ. ಅವರೊಬ್ಬ ವೈದ್ಯರು. ದೈಹಿಕ ತರಬೇತಿಗಾರ ಅಷ್ಟೇ. ಹಿಂದೆ ಜನರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು ಈಗಲೂ ಅದನ್ನೇ ಮಾಡಿಕೊಂಡಿರಲಿ ಎಂದು ಲಾಲೂ ಹೇಳಿದ್ದಾರೆ.

ಆರೆಸ್ಸೆಸ್ ಹಾಗೂ ಬಿಜೆಪಿಯ ಷಡ್ಯಂತ್ರ ರಾಮ್‌ದೇವ್‌ ಹೊಸ ದಾಳವಾಗುತ್ತಿದ್ದಾರೆ. ಬಾಬಾಗೆ ರಾಜಕೀಯಕ್ಕೆ ಸೇರುವ ಮನಸ್ಸಿದ್ದರೆ ಸ್ವಂತ ನೇರವಾಗಿ ಸ್ಪರ್ಧೆಗಿಳಿಯಲಿ. ಆರೆಸ್ಸೆಸ್ ಬೆಂಬಲ ಪಡೆದರೆ ಬಾಬಾ ಅವರ ಜೊತೆ ಅವರ ಅಭಿಮಾನಿಗಳ ಬದುಕು ಸರ್ವನಾಶವಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ರಾಮ್‌ದೇವ್ ವಿರುದ್ಧ ಮಧ್ಯರಾತ್ರಿಯ ಪೊಲೀಸ್ ಕಾರ್ಯಾಚರಣೆ ನಡೆಸಿದ ಕೇಂದ್ರ ಸರಕಾರವನ್ನು ಖಂಡಿಸಿದ ಲಾಲೂ, ಸ್ತ್ರೀವೇಷಧಾರಿಯಾಗಿ ಎಸ್ಕೇಪ್ ಆಗಲು ಯತ್ನಿಸಿದ ಬಾಬಾ ಕ್ರಮವನ್ನು ಕಂಡು ನಗು ತಡೆಯಲು ಆಗಲಿಲ್ಲ ಎಂದು ಲಾಲೂ ಮುಸಿಮುಸಿ ನಗುತ್ತಾರೆ.

ರಾಮ್‌ದೇವ್‌ರ ಟ್ರಸ್ಟ್‌ಗಳಲ್ಲಿ ಇರುವ ಹಣದ ಬಗ್ಗೆ ಸರ್ಕಾರ ತನಿಖೆ ನಡೆಸಲಿ. ಅಣ್ಣಾ ಹಝಾರೆ ಹಾಗೂ ರಾಮ್‌ದೇವ್ ಪ್ರಕರಣಗಳನ್ನು ಕೇಂದ್ರ ಸರಕಾರ ನಿಭಾಯಿಸಿದ ರೀತಿ ತಪ್ಪು. ಹಾದಿ ಬೀದಿ ಪ್ರತಿಭಟನೆಗಳಿಗೆ ಸರ್ಕಾರ ಬಗ್ಗುತ್ತಾ ಹೋದರೆ, ವ್ಯವಸ್ಥೆಗೆ ಬೆಲೆ ಇರುವುದಿಲ್ಲ. ಸಂವಿಧಾನ ವಿರೋಧಿ ಪ್ರತಿಭಟನೆಗಳಿಗೆ ಸರ್ಕಾರವೇ ಪ್ರೋತ್ಸಾಹ ನೀಡಿದಂತಾಗುತ್ತದೆ ಎಮ್ದು ಲಾಲೂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+