ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು: ಮಾನವ ತಲೆ ಬುರಡೆ ತೊಟ್ಟಿಯಲ್ಲಿ ಸಿಗುತ್ತೆ

By Mahesh
|
Google Oneindia Kannada News

Human skull found, Mangalore
ಮಂಗಳೂರು, ಜೂ 12: ಶನಿವಾರ ಸಂಜೆ ಮೋರ್ಗನ್ ಗೇಟ್‌ ಎಂಫಸಿಸ್ ಆವರಣದ ಬಳಿ ಜನವೋ ಜನ. ಎಲ್ಲರೂ ಅಲ್ಲಿದ್ದ ಕಸದ ತೊಟ್ಟಿ ನೋಡಿ ಮುಖ ಮುಚ್ಚಿಕೊಂಡು, ಯಾರಿಗೋ ಶಪಿಸುತ್ತಿದ್ದರು. ಜನಕ್ಕೆ ಅಲ್ಲಿ ಕಂಡಿದ್ದು ನಾಲ್ಕು ತಲೆ ಬುರುಡೆ ಹಾಗೂ ಕೆಲವು ಮೂಳೆಗಳು ದೊರೆತಿವೆ.ಈ ಹಿಂದೆ ಕೂಡಾ ಮಂಗಳೂರಿನಲ್ಲಿ ಇದೇ ರೀತಿ ಮಾನವನ ತಲೆ ಬುರುಡೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕ, ಕುತೂಹಲ ಉಂಟು ಮಾಡಿತ್ತು.

ಮೂಳೆಗಳ ಮೇಲೆ ಹೊಲಿಗೆ ಹಾಕಿದ ಗುರುತುಗಳಿದ್ದು,ಇವುಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ತರಬೇತಿಗಾಗಿ ಬಳಸಿರಬಹುದು. ಸಮೀಪದ ಆಸ್ಪತ್ರೆಗೆ ಸೇರಿದ್ದಿರಬಹುದು ಎಂದು ಶಂಕಿಸಲಾಗಿದೆ.ತಲೆ ಬುರುಡೆ ಹಾಗೂ ಮೂಳೆಗಳನ್ನು ಸದ್ಯಕ್ಕೆ ವೆನ್‌ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇವುಗಳನ್ನು ಫೊರೆನಿಕ್ಸ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪಾಂಡೇಶ್ವರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಭಾರತಿ ಹೇಳಿದ್ದಾರೆ.

ಸುಮಾರು ಐದು ವರ್ಷಗಳ ಹಿಂದೆ ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಬಳಿ ತಲೆ ಬುರುಡೆ ಹಾಗೂ ಮೂಳೆಗಳು ಸಿಕ್ಕಿದ್ದವು. ಮೆಡಿಕಲ್ ಡಿಸ್ಪೋಸ್ ಸರಿಯಾಗಿ ಮಾಡದೆ ಜನರಲ್ಲಿ ಆತಂಕ ಹಾಗೂ ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾಗುತ್ತಿರುವ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಜನ ಛೀ ತೂ ಎಂದು ಉಗಿಯುತ್ತಿದ್ದಾರೆ. ಯಾವುದೇ ಮನುಷ್ಯನಾದರೂ ಅಂತಿಮ ಸಂಸ್ಕಾರ ಸರಿಯಾಗಿ ಆಗದೆ ಹಾದಿ ಬೀದಿ ಹೆಣವಾಗಿ ತೊಟ್ಟಿಯಲ್ಲಿ ತಲೆ ಬುರುಡೆಯಾಗಿ ಕಾಣಿಸಿಕೊಳ್ಳುವುದು ಯಾರು ಸಹಿಸುವಂಥ ದೃಶ್ಯವಲ್ಲ. ಆಸ್ಪತ್ರೆಗಳು ದೇಹ ದಾನ ಮಾಡುವ ವ್ಯಕ್ತಿಗಳ ಅಂಗಾಂಗಗಳು ಇದೇ ರೀತಿ ಎಲ್ಲೆಡೆ ಚೆಲ್ಲಿದರೆ ಎನು ಗತಿ ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ.

English summary
Four human skulls wrapped in a polythene and bones were found in the public trash bin in Morgan's Gate locality in Mangalore on June 11 evening.Pandeshwar police led by sub-inspector Bharati inspected the spot and handed over the skulls to government Wenlock hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X