ಹಿಮಾಚಲದಲ್ಲಿ ಬಾಬಾ ಭೂಮಿ ಮುಟ್ಟುಗೋಲು : ಕಾಂಗ್ರೆಸ್‌

ramdev
ಧರ್ಮಶಾಲಾ, ಜೂನ್ 12: ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹಕ್ಕಿಳಿದಿರುವ ಬಾಬಾ ರಾಮದೇವ್‌ ವಿರುದ್ಧ ಕಾಂಗ್ರೆಸ್‌ ಮುಗಿಬಿದ್ದಿದೆ. ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದರೆ ಬಾಬಾಗೆ ನೀಡಲಾಗಿರುವ ಜಮೀನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಿದೆ ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಠಾಕೂರ್ ಕೌಲ್‌ ಸಿಂಗ್‌ ಹೇಳಿದ್ದಾರೆ.

ಹಿಮಾಚಲಪ್ರದೇಶದಲ್ಲಿ ಬಾಬಾ ರಾಮದೇವ್‌ ಆಶ್ರಮಕ್ಕೆ ಅಲ್ಲಿನ ಬಿಜೆಪಿ ಸರ್ಕಾರ ಜುಜುಬಿ ಹಣಕ್ಕೆ ಎಕರೆಗಟ್ಟಲೆ ಜಮೀನು ನೀಡಿದೆ. ಸೋಲನ್‌ ಜಿಲ್ಲೆಯಲ್ಲಿ 59 ಎಕರೆ ಬೆಲೆಬಾಳುವ ಭೂಮಿಯನ್ನು ಬಾಬಾಗೆ ಜುಜುಬಿ ಹಣಕ್ಕೆ ಮಾರಾಟ ಮಾಡಿದೆ.

ಇದರ ಜತೆಗೆ ಹಿಮಾಚಲ ಪ್ರದೇಶದ ನಿವಾಸಿಗಳಲ್ಲದವರಿಗೆ ಸುಮಾರು 25 ಸಾವಿರ ಎಕರೆ ಭೂಮಿಯನ್ನು ಪರಭಾರೆ ಮಾಡಲಾಗಿದೆ. ರಾಜ್ಯದಲ್ಲಿ ಒಂದೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅದನ್ನು ಮರಳಿ ವಶಪಡಿಸಿಕೊಳ್ಳಲಾಗುವುದು ಕೌಲ್‌ ಸಿಂಗ್‌ ಹೇಳಿದ್ದಾರೆ.

ಬೇರೆ ರಾಜ್ಯದ ಜನರು ಭೂಮಿಯನ್ನು ಕೊಳ್ಳುವ ನಿರ್ಬಂಧವಿರುವ ಸೆಕ್ಷನ್‌ 118ರಡಿಯ ರಾಜ್ಯ ಭೂಸುಧಾರಣೆ ಮತ್ತು ಒಕ್ಕಲುತನ ಕಾಯ್ದೆಯನ್ನು ಹಾಲಿ ಬಿಜೆಪಿ ಸರ್ಕಾರ ಸಂಪೂರ್ಣ ಉಲ್ಲಂಘಿಸಿದೆ ಎಂದೂ ಕೌಲ್‌ ಸಿಂಗ್‌ ಆಪಾದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+