'ಯಡಿಯೂರಪ್ಪ 6,000 ಕೋಟಿ ರು. ದುಡ್ಡು ಮಾಡಿಕೊಂಡಿದ್ದಾರೆ'

ವರುಣಾ ವಿಧಾನ ಸಭಾ ಕ್ಷೇತ್ರದ ತಾಲ್ಲೂಕಿನ ರಂಗಸಮುದ್ರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಇತರೆ ರಸ್ತೆ ಅಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ರಂಗಸಮುದ್ರ ರಸ್ತೆ ಕಾಮಗಾರಿಗೆ ಅವರು ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡುತ್ತಾ ಈ ಶಂಕೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯ ಆಪ್ತ ಸಹಾಯಕ ಕಾ.ಪು. ಸಿದ್ದಲಿಂಗಸ್ವಾಮಿ ಅಡುಗೆ ಮಾಡಿಕೊಂಡು ಇದ್ದ ಹುಡುಗ. ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದು ಲಕ್ಷಾಂತರ ರೂಪಾಯಿಯನ್ನು ಸಿಕ್ಕ ಸಿಕ್ಕ ಕಡೆ ಹಂಚಿಕೊಂಡು ಬರುತ್ತಿದ್ದಾರೆ. ಆ ಹುಡುಗನ ಹಿಂದೆ ದಿನಕ್ಕೆ 20 ಕಾರು ಓಡಾಡುತ್ತಿವೆ. ನಾನು ವಿರೋಧ ಪಕ್ಷದ ನಾಯಕನಾದರೂ ಎರಡು ಕಾರು ನನ್ನ ಹಿಂದೆ ಬರುವುದಿಲ್ಲ. 3 ವರ್ಷದಲ್ಲಿ ಅಡುಗೆ ಮಾಡುವವವನೇ ಇಷ್ಟು ಹಣ ಲೂಟಿ ಮಾಡಿದ್ದರೆ ಮುಖ್ಯಮಂತ್ರಿ ಎಷ್ಟು ಕೋಟಿ ಲೂಟಿ ಮಾಡಿರಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಶೋಭಾನೇ ವಾಸಿ: ರಾಜ್ಯದ 224 ಕ್ಷೇತ್ರಗಳಲ್ಲಿ ನನ್ನ ವಿರುದ್ಧ ಈಶ್ವರಪ್ಪ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸಲಿ. ಯಾರನ್ನೋ ಮೆಚ್ಚಿಸಲು ಬಾಯಿಗೆ ಬಂದಂತೆ ಮಾತನಾಡುವ ಈಶ್ವರಪ್ಪ ವಿದ್ಯುತ್ ಖಾತೆ ನಿಭಾಯಿಸಲು ಅಸಮರ್ಥರಾಗಿ ಹೊರ ಬಂದು ಆ ಹೆಣ್ಣು ಮಗಳ ಕೈಯಲ್ಲಿ ಅಧಿಕಾರ ನೀಡಿದ್ದಾರೆ ಎಂದು ಟೀಕಿಸಿದರು.
ಶಾಸಕ ಡಾ.ಎಚ್.ಸಿ.ಮಹಾದೇವಪ್ಪ, ಸದಸ್ಯ ಕೆ.ಮಹಾದೇವ್, ವರುಣ ಜಿ.ಪಂ ಸದಸ್ಯ ಸಿದ್ದೇಗೌಡ, ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ತಾಪಂ. ಅಧ್ಯಕ್ಷೆ ಗಾಯಿತ್ರಿ, ಉಪಾಧ್ಯಕ್ಷೆ ಸಿ.ವೆಂಕಟೇಶ್, ಸದಸ್ಯರಾದ ಅಂದಾನಿ, ಪ್ರಭಾಕರ್, ರಂಗಸಮುದ್ರ ಗ್ರಾ.ಪಂ ಅಧ್ಯಕ್ಷೆ ರೇಣುಕಾ, ತುಂಬಲ ಗ್ರಾ.ಪಂ ಅಧ್ಯಕ್ಷೆ ಚುಂಚೇಗೌಡ, ಬ್ಲಾಕ್ ಅಧ್ಯಕ್ಷರಾದ ಮಂಜುನಾಥ್, ರಮೇಶ್ ಮುದ್ದೇಗೌಡ, ಗೋಪಾಲ್, ಚಿಕ್ಕರಾಮೇಗೌಡ, ನಾರಾಯಣ, ಭಾಗ್ಯಮ್ಮ, ತುಂಬಲ ಬಾಬು, ಮನಸೂರು ಆಲಿ, ಕರಾವೇ ವೆಂಕಟೇಶ್, ಕರೀಗೌಡ, ಬಾಬೂಜಿ, ಮಂಟೆಲೀಂಗು, ಬಸವರಾಜು, ಮಹಾದೇವಣ್ಣ, ಅರುಣ್, ಇಓ ಚಿಕ್ಕಲಿಂಗಯ್ಯ, ತಹಶೀಲ್ದಾರ್ ಶೈಲಜಾ, ಸೋಮಶೇಖರ್, ಪುರುಷೋತ್ತಮ್, ಖಾನ್, ಜರ್ನಾಧನ್, ನಾಗೇಂದ್ರಸಿಂಗ್, ಸಂಪತ್ ದೊರೈರಾಜ್ ಇತರರು ಉಪಸ್ಥಿತರಿದ್ದರು.












Click it and Unblock the Notifications