ಕೊಟ್ಟಮಾತಿಗೆ ತಪ್ಪಿದ ಪ್ರಿಯಕರ, ಪ್ರೇಯಸಿ ಆತ್ಮಹತ್ಯೆ

Love Suicide
ಬೆಂಗಳೂರು, ಜೂನ್ 11: ಅವನು ಬೆಳಗ್ಗೆ ಪಾರ್ಕ್ ಗೆ ಬರುವುದಾಗಿ ಹೇಳಿದ್ದ. ಇವಳು ಕಾದು ಕುಳಿತಳು. ಸಂಜೆಯಾದರೂ ಆ ಪುಣ್ಯಾತ್ಮ ಪ್ರಿಯತಮನ ಸುಳಿವಿಲ್ಲ. ಇದರಿಂದ ನೊಂದ ಶೋಭಾ(18) ಎಂಬ ಯುವತಿ ವಿಷ ಸೇವಿಸಿ ಪಾರ್ಕಿನಲ್ಲೇ ಸಾವನ್ನಪ್ಪಿದ್ದಾಳೆ.

ಬೆಂಗಳೂರಿನ ವಿಜಯನಗರದ ಶಾಂತಿನಗರ ಹೋಟೆಲ್ ನ ಪಕ್ಕದ ಪಾರ್ಕಿನಲ್ಲಿ ಈ ಘಟನೆ ನಡೆದಿದೆ. ಶೋಭಾ ಮತ್ತು ಲಗೇಜ್ ಆಟೋ ಚಾಲಕ ಗಿರೀಶ್ ಕೆಲವು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಪ್ರೀತಿ ಮನೆಯವರಿಗೂ ತಿಳಿದಿತ್ತು.

ಆದರೆ ಪ್ರೀತಿ ವಿಷಯ ತಿಳಿದ ಪೋಷಕರು ಮದುವೆಗೆ ಮುಂದಾದರು. ಆದರೆ ಗಿರೀಶ್ ಮನೆಯವರು ವರದಕ್ಷಿಣೆ ಕೇಳಿದರು. ಮಗಳು ಸುಖವಾಗಿರಲೆಂದು ಒಂದು ಲಕ್ಷ ರು. ವರದಕ್ಷಿಣೆ ನೀಡಲು ಶೋಭಾ ಮನೆಯವರು ಒಪ್ಪಿದ್ದಾರೆ. ಆದರೆ ಗಿರೀಶ್ ಮನೆಯವರು ಹೆಚ್ಚು ವರದಕ್ಷಿಣೆ ಕೇಳಿದರು. ಗಿರೀಶ್ ಗೆ ಬೇರೆ ಮದುವೆ ಮಾಡಲು ಮುಂದಾದರು.

ಪ್ರೀತಿ ಕೈತಪ್ಪಿ ಹೋಗುತ್ತೆ ಎಂದರಿತ ಪ್ರೇಮಿಗಳು ಓಡಿ ಹೋಗುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಬೆಳಗ್ಗೆ ಇವರಿಬ್ಬರೂ ಪಾರ್ಕ್ ಗೆ ಬರಬೇಕಿತ್ತು. ಇವಳು ಮುಂಜಾನೆಯೇ ಬಂದು ಗಿರೀಶ್ ಗಾಗಿ ಕಾಯುತ್ತಿದ್ದಳು. ಆದರೆ ಸಂಜೆಯಾದರೂ ಆತ ಬಾರದೇ ಇದ್ದಾಗ ಇವಳು ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾಳೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+