ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ರೈಲು ನಿಲ್ದಾಣದಲ್ಲಿ ಬೈಸಿಕಲ್ ಸೌಲಭ್ಯ

By Mahesh
|
Google Oneindia Kannada News

Cycle Chalao Mumbai
ಮುಂಬೈ ಜೂ 9: ಪ್ರಯಾಣಿಕರ ಅನುಕೂಲಕ್ಕಾಗಿ ಬಾಡಿಗೆ ಸೈಕಲ್ ಸೌಲಭ್ಯವನ್ನು ಬಾಂದ್ರ, ಅಂಧೇರಿ ಮತ್ತು ದಾದರ್ ನಿಲ್ದಾಣಗಳಲ್ಲಿ ಕಲ್ಪಿಸುವ ವ್ಯವಸ್ಥೆ ಜೂ 6 ರಿಂದ ಜಾರಿಯಾಗಿದೆ. ಸಾರ್ವಜನಿಕರು ಮುಕ್ತವಾಗಿ ಈ ವ್ಯವಸ್ಥೆಯನ್ನು ಹೊಗಳಿದ್ದು, ದೇಶದ ಎಲ್ಲೆಡೆ ಈ ರೀತಿ ಸೌಲಭ್ಯ ವಿಸ್ತರಣೆಗೊಳ್ಳಲಿ ಎಂದು ಹಾರೈಸಿದ್ದಾರೆ.

ರೈಲು ಇಳಿದ ತಕ್ಷಣ ನಗರದ ಕೆಲವು ಹತ್ತಿರದ ಸ್ಥಳಗಳಿಗೆ ತೆರಳುವ ಪ್ರಯಾಣಿಕರು ಇನ್ನೂ ಮುಂದೆ ಆಟೋ,ಕಾರು ಹಾಗೂ ನಗರದ ಇತರೆ ಸಾರಿಗೆಗಾಗಿ ಕಾಯುವ ತೊಂದರೆ ಅನುಭವಿಸಬೇಕಿಲ್ಲ. ಅದಕ್ಕೆ ಪರ್ಯಾಯವಾಗಿ ಒಬ್ಬಿಬ್ಬರ ಸುಲಭ ಸಂಚಾರಕ್ಕಾಗಿ ಈಗ ರೈಲು ನಿಲ್ದಾಣದಲ್ಲೇ ಬಾಡಿಗೆ ಸೈಕಲ್ ಸೌಲಭ್ಯ ಒದಗಿಸಿಲು ಐ ಇನಿಶಿಯೇಟ್ ಚಾರಿಟೇಬಲ್ ಸೊಸೈಟಿ ತಯಾರಿ ನಡೆಸಿದೆ.

ಈಗ ಸದ್ಯಕ್ಕೆ ಬಾಂದ್ರ ನಿಲ್ದಾಣದಲ್ಲಿ ಈ ಸೌಲಭ್ಯ ಆರಂಭಿಲಾಗಿದ್ದು, ಅನಂತರ ದಾದರ್, ಮತ್ತು ಅಂಧೇರಿ ನಿಲ್ದಾಣಗಳಲ್ಲೂ ಈ ಸೌಲಭ್ಯ ಕಲ್ಪಿಸಲಾಗುತ್ತದೆ 'ಸೈಕಲ್ ಚಲೋ" ಎಂಬ ಸೈಕಲ್ ಬಾಡಿಗೆ ಕೊಡುವ ಸಂಸ್ಥೆ ಸಹ ಜೂನ್ 6 ರಿಂದ ಸುಮಾರು 20 ಸೈಕಲ್‌ಗಳನ್ನು ಬಾಂದ್ರಾ ನಿಲ್ದಾಣದಿಂದ ಪ್ರಾಯೋಗಿಕವಾಗಿ ನೀಡಲಾಗುತ್ತಿದೆ. ನಂತರ ಬೇಡಿಕೆಗೆ ತಕ್ಕಂತೆ ಸೈಕಲ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವು ಎಂದು ರಾಜ್ ಜನಗಮ್ ಹೇಳಿದರು.

ಇದೇ ಮಾದರಿ ವ್ಯವಸ್ಥೆಯನ್ನು ಅಂಧೇರಿ ನಿಲ್ದಾಣದಲ್ಲೂ ಶೀಘ್ರ ಕಾರ್ಯರೂಪಕ್ಕೆ ತರಲಾಗುವುದು. ನಿಲ್ದಾಣ ಬಳಿ ಬಾಡಿಗೆ ಸೈಕಲ್ ಪಾರ್ಕಿಂಗ್ ವ್ಯವಸ್ಥೆಯಿದೆ. ಪ್ರತಿ ದಿನ ಸಾಮಾನ್ಯ ಬೆಲೆ ತೆತ್ತು ಸವಾರಿ ಮಾಡಬಹುದಾಗಿದೆ ಎಂದು ರಾಜ್ ಹೇಳುತ್ತಾರೆ.

ಮುಂಬೈ ಜನರ ಬಹು ದಿನದ ಬೇಡಿಕೆಯಂತೆ ಈ ಸೇವೆಯನ್ನು ಆರಂಭಿಸಿದ್ದು ಜನರ ಆಸಕ್ತಿ ಕೆರಳಿಸಲಿದೆ. ರೈಲು ನಿಲ್ದಾಣಗಳಲ್ಲಿ ಸೈಕಲ್ ಒದಗಿಸುವ ಸೇವೆ ದೇಶದಲ್ಲೆ ಪ್ರಥಮ ಎನ್ನಬಹುದು. ಸೈಕಲ್ ಸೇವೆ ಬಗ್ಗೆ ಸಮಾಜಿಕ ಜಾಲ ತಾಣ ಫೇಸ್ ಬುಕ್ ಮೂಲಕ ಜನಾಭಿಪ್ರಾಯ ಸಂಗ್ರಹ ಮಾಡಲಾಯಿತು. ಬಹಳಷ್ಟು ಜನ ಸೈಕಲ್ ಸವಾರಿಯತ್ತ ಒಲವು ತೋರಿಸಿರುವುದು ಪರಿಸರ ಕಾಳಜಿ ಮೆರೆಯಲು ಪಣತೊಟ್ಟಿರುವುದು ಸಂತೋಷದ ವಿಷಯ ಎಂದು ಜನಗಮ್ ಹೇಳಿದ್ದಾರೆ.

English summary
Cycle Chalao! Is an innovative environment-focussed venture by Social Enterprise 'Impact Carbocuts Private Limited' and ‘I-initiate Charitable Society’. Cycling as the best mode of public transportation and rental services Cycle Chalao started in Andheri, Dadar and Bandra Railway Station gaining popularity with facebook poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X