ರಾಮದೇವ್ ಆಸ್ತಿ ವಿವರ ಬಹಿರಂಗಕ್ಕೆ ಕ್ಷಣಗಣನೆ ಆರಂಭ
ಹರಿದ್ವಾರ.
ಜೂ 9: ಯೋಗ ಗುರು ಬಾಬಾ ರಾಮದೇವ್ ಅವರು ತಮ್ಮ ಬಳಿಯಿರುವ ಇಡೀ ಆಸ್ತಿಯನ್ನು ಇಂದು ಸಂಜೆ ವೇಳೆಗೆ (ಜೂನ್ 9) ಬಹಿರಂಗಪಡಿಸುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ದೇಶ ರಾಮದೇವ್ ಆಸ್ತಿ ವಿವರಕ್ಕಾಗಿ ಕುತೂಹಲದಿಂದ ಕಾಯತೊಡಗಿದೆ. id="toptextpromo">ಹರಿದ್ವಾರದ
ಪತಂಜಲಿ ಯೋಗಾಶ್ರಮ ಮತ್ತು ತಮ್ಮ ಒಡೆತನದಲ್ಲಿರುವ ಎಲ್ಲ ಸಂಸ್ಥೆಗಳ ಹಣಕಾಸು ವಿವರವನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಾಗಿ ರಾಮದೇವ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಭ್ರಷ್ಟಾಚಾರದ
ವಿರುದ್ಧ ಆಂದೋಲನ ಹಮ್ಮಿಕೊಂಡಿರುವ ರಾಮದೇವ್ ಅವರು 6 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದೇ ವೇಳೆ, ತಾವು 11 ಸಾವಿರ ಮಂದಿಯಿರುವಂತಹ ಸಶಸ್ತ್ರ ತಂಡವನ್ನು ಕಟ್ಟುವ ಬಗ್ಗೆ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.











Click it and Unblock the Notifications