ಆಸ್ತಿ ವಿವರ ಬಹಿರಂಗಕ್ಕೆ ಸಿದ್ಧ ಎಂದ ಪೇಜಾವರ ಶ್ರೀ

ಬುಧವಾರ (ಜೂನ್ 8) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾ ರಾಮದೇವ್ ಅವರು ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರ ಸತ್ಯಾಸತ್ಯತೆ ಗೊತ್ತಿಲ್ಲ. ನಾನಂತೂ ನೈತಿಕತೆ ಇಟ್ಟುಕೊಂಡಿದ್ದೇನೆ' ಎಂದರು.
ರಾಜ್ಯದ ಬಿಜೆಪಿ ಸರ್ಕಾರದಿಂದ ಲಾಭ ಪಡೆದುಕೊಂಡಿಲ್ಲ. ಭಕ್ತರು ಕೊಟ್ಟಿರುವ ಹಣದಲ್ಲಿ ಸಾಮಾಜಿಕ ಕೆಲಸ ಮಾಡಿಕೊಂಡಿದ್ದೇವೆ. ಆದರೆ ಅದು ಕಪ್ಪು ಹಣವೋ ಅಥವಾ ಇನ್ಯಾವ ಮೂಲದ ಹಣವೋ ಎನ್ನುವುದನ್ನು ನಾವು ಗಮನಿಸುವುದಿಲ್ಲ. ಆದರೆ ಹಣ ನೀಡಿದವರ ವಿವರ, ಲೆಕ್ಕಪತ್ರ ಸರಿಯಾಗಿ ಪಾಲನೆ ಮಾಡುತ್ತೇವೆ' ಎಂದರು.
ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ಕೇಂದ್ರ ಸರ್ಕಾರದ ನಡುವೆ ಉಂಟಾಗಿರುವ ಗೊಂದಲ ಸರಿಪಡಿಸಲು ಮಧ್ಯಸ್ಥಿಕೆ ವಹಿಸಲು ಮೂವರು ಶ್ರೀಗಳು ಸಿದ್ಧರಾಗಿದ್ದಾರೆ ಎನ್ನುವ ಮಾಹಿತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಆ ಬಗ್ಗೆ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇನೆ. ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ರವಿಶಂಕರ ಗುರೂಜಿ ಜತೆ ಸಂಪರ್ಕದಲ್ಲಿದ್ದಾರೆ. ಇದೇ 10 ರಂದು ಈ ಬಗ್ಗೆ ಸಭೆ ಸೇರಿ ಮಾತುಕತೆ ನಡೆಸಲಿದ್ದೇವೆ' ಎಂದು ತಿಳಿಸಿದರು











Click it and Unblock the Notifications