• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಸಂತ ಪ್ರಕಾಶನದಿಂದ ಖ್ಯಾತರ ವ್ಯಕ್ತಿಚಿತ್ರ ಮಾಲಿಕೆ

By Prasad
|

ಬೆಂಗಳೂರು, ಜೂ. 9 : ಜನಸಾಮಾನ್ಯರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮನೋವಿಕಾಸಕ್ಕಾಗಿ ವಸಂತ ಪ್ರಕಾಶನ ಭಾರತದ ವಿಖ್ಯಾತರ ವ್ಯಕ್ತಿಚಿತ್ರ ಮಾಲೆಯನ್ನು ತಂದಿದ್ದು, 25 ಪುಸ್ತಕಗಳು ಜೂನ್ 12, ಭಾನುವಾರದಂದು ಬೆಳಿಗ್ಗೆ 10.15 ಗಂಟೆಗೆ ಚಾಮರಾಜಪೇಟೆಯಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿವೆ.

ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿರುವ ಡಾ. ಯುಆರ್ ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ವಿಜ್ಞಾನಿ ಡಾ. ಯುಆರ್ ರಾವ್, ಶಾಸಕ ಸುರೇಶ್ ಕುಮಾರ್ ಮತ್ತು ರಂಗಕರ್ಮಿ ಸಿಆರ್ ಸಿಂಹ ಅವರು ಭಾಗವಹಿಸುತ್ತಿದ್ದಾರೆ.

ಇಂದಿನ ಧಾವಂತದ ಬದುಕಿನಲ್ಲಿ ಸ್ಪರ್ಧಾ ಜಗತ್ತಿನಲ್ಲಿ ಮುಳುಗಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಮ್ಮ ಸುತ್ತಲಲ್ಲೇ ಇದ್ದ ಹಾಗು ಇರುವ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿವಳಿಕೆಯಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ, ಯಾವುದೇ ವಿಚಾರವನ್ನು ಕಡಿಮೆ ಸಮಯದಲ್ಲಿ ಅತ್ಯಂತ ಸುಲಭವಾಗಿ ಗ್ರಹಿಸಬಹುದಾದ ಖ್ಯಾತರ ವ್ಯಕ್ತಿಚಿತ್ರಗಳನ್ನು ವಸಂತ ಪ್ರಕಾಶನ ಹೊರತಂದಿದೆ.

ವಿಜ್ಞಾನ, ಕ್ರೀಡೆ, ಸಂಗೀತ, ತತ್ತ್ವಶಾಸ್ತ್ರ, ಲಲಿತ ಕಲೆ, ರಾಜಕೀಯ, ಇತಿಹಾಸ, ಅರ್ಥಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಮೇಧಾವಿಗಳನ್ನು, ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಮಾಲಿಕೆಯನ್ನು ತರಲಾಗಿದೆ. ಪ್ರತಿ ಪುಸ್ತಕದ ಬೆಲೆ 30 ರು. ಮಾತ್ರ.

ಪುಸ್ತಕಗಳು ಮತ್ತು ಬರೆದವರ ವಿವರಗಳು

1. ಶ್ರೀಕೃಷ್ಣದೇವರಾಯ - ನರೇಂದ್ರ ಕಟ್ಟಿ

2. ಝಾನ್ಸಿ ರಾಣಿ ಲಕ್ಷ್ಮೀಬಾಯಿ - ನರೇಂದ್ರ ಕಟ್ಟಿ

3. ಜಮ್ಷೆಡ್ಜಿ ಟಾಟಾ - ನವರತ್ನ ಸುಧೀರ್

4. ಅಜೀಂ ಪ್ರೇಮ್‌ಜಿ - ಅಮೃತ್ ಜೋಗಿ

5. ಎನ್. ಆರ್. ನಾರಾಯಣಮೂರ್ತಿ - ಅಮೃತ್ ಜೋಗಿ

6. ಕ್ಯಾಪ್ಟನ್ ಗೋಪಿನಾಥ್ - ಬಿ.ಎಸ್. ಜಯಪ್ರಕಾಶ ನಾರಾಯಣ

7. ವಾರೆನ್ ಬಫೆಟ್ - ಮಹಾಬಲ ಸೀತಾಳಭಾವಿ

8. ಸರ್ ಎಂ. ವಿಶ್ವೇಶ್ವರಯ್ಯ - ಕೆ.ಎನ್. ಪರಾಂಜಪೆ

9. ಸ್ಯಾಮ್ ಪಿತ್ರೋಡಾ - ವಿಶ್ವನಾಥ ಎಂ. ಬಸವನಾಳಮಠ

10. ರಮಣ ಮಹರ್ಷಿ - ಚಿಂತಾಮಣಿ ಕೊಡ್ಲೆಕೆರೆ

11. ಬಾಬಾ ಆಮ್ಟೆ - ಚಂದ್ರಕಾಂತ ಪೋಕಳೆ

12. ಅಣ್ಣಾ ಹಜಾರೆ - ರಘುನಾಥ ಚ.ಹ.

13. ಮೇಧಾ ಪಾಟ್ಕರ್ - ಹರೀಶ್ ಕೇರ

14. ವಂದನಾ ಶಿವ - ಮಹಾಬಲ ಸೀತಾಳಭಾವಿ

15. ಆಂಗ್ ಸಾನ್ ಸೂಕಿ - ನರೇಂದ್ರ ಕಟ್ಟಿ

16. ಡಾ. ವಿಕ್ರಂ ಸಾರಾಭಾಯಿ - ಸಿ.ಆರ್. ಸತ್ಯ

17. ಅಬ್ದುಲ್ ಕಲಾಂ - ನರೇಂದ್ರ ಕಟ್ಟಿ

18. ಡಾ. ಯು.ಆರ್.ರಾವ್ - ಸಿ.ಆರ್. ಸತ್ಯ

19. ಎಂ.ಎಸ್. ಸುಬ್ಬುಲಕ್ಷ್ಮಿ - ಎನ್.ಎಸ್. ಕೃಷ್ಣಮೂರ್ತಿ

20. ಪಂ. ಭೀಮಸೇನ ಜೋಶಿ - ಎಸ್. ದಿವಾಕರ್

21. ಪಂ. ಮಲ್ಲಿಜಾರ್ಜುನ ಮನಸೂರ - ವಿವೇಕಾನಂದ ಪಿ.ವಿ.

22. ಚಾರ್ಲಿ ಚಾಪ್ಲಿನ್ - ಎಚ್.ಎಸ್. ಮಂಜುನಾಥ

23. ವಾಲ್ಟ್ ಡಿಸ್ನಿ - ಮಹಾಬಲೇಶ್ವರ ರಾವ್

24. ಸಚಿನ್ ತೆಂಡೂಲ್ಕರ್ - ವಿಶಾಖ ಎನ್.

25. ವಿಶ್ವನಾಥನ್ ಆನಂದ್ - ಮಾ.ವೆಂ.ಸ. ಪ್ರಸಾದ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vasantha Prakashana of Bangalore has come out with a unique way to let our students know about famous people in India, who contributed immensely to the society in many walks of life. The books are being released on June 12, Sunday at Kannada Sahitya Prarishat, Chamrajpet, Bangalore, under the chairmanship of Dr UR Ananthamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more