ಕರಾಳ ಸ್ಥಿತಿ: ಶಾಂತಿಯುತ ಪ್ರತಿಭಟನೆಗೆ ರಾಮದೇವ್ ಕರೆ
ನವದೆಹಲಿ,
ಜೂನ್ 5: ರಾಮಲೀಲಾ ಮೈದಾನದಲ್ಲಿ ಭಾನುವಾರ ಬೆಳಗಿನ ಜಾವ 1 ಗಂಟೆಯಲ್ಲಿ ದೆಹಲಿ ಪೊಲೀಸರು ನಡೆಸಿದ ಪೈಶಾಚಿಕ ಕೃತ್ಯದ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸುವಂತೆ ಯೋಗ ಗುರು ಬಾಬಾ ರಾಮ್‌ದೇವ್ ಕರೆ ನೀಡಿದ್ದಾರೆ. ಆದರೆ ಹಿಂಸೆಗೆ ಅವಕಾಶ ನೀಡದೆ ಸಂಯಮ ಕಾಪಾಡಬೇಕೆಂದೂ ಅವರು ತಿಳಿಸಿರುವುದಾಗಿ ರಾಮದೇವ್ ಅವರ ನಿಕಟವರ್ತಿ ಹೇಳಿದ್ದಾರೆ. id="toptextpromo">ನಡುರಾತ್ರಿ
1 ಗಂಟೆ ವೇಳೆಯಲ್ಲಿ ಪೊಲೀಸರು ನೂರಾರು ಅಮಾಯಕರ ಮೇಲೆ ಬಲ ಪ್ರಯೋಗ ನಡೆಸಿರುವುದನ್ನು ರಾಮದೇವ್ ಪ್ರಶ್ನಿಸಿದ್ದಾರೆ. ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಇದನ್ನು ಖಂಡಿಸಿ, ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ಪೊಲೀಸರು ರಾಮದೇವ್ ಅವರನ್ನು ವಶಕ್ಕೆ ತೆಗೆದುಕೊಳ್ಳುವ ವೇಳೆ ರಾಮದೇವ್ ತಮ್ಮ ಅನುಯಾಯಿಗಳಿಗೆ ತಿಳಿಸಿದ್ದಾರೆ ಎಂದು ಪತಂಜಲಿ ಯೋಗಪೀಠದ ಮುಖ್ಯಸ್ಥ ಸ್ವಾಮಿ ಸಂಪೂರ್ಣಾನಂದ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>'1975ರ
ತುರ್ತು ಪರಿಸ್ಥಿತಿ ದಿನಗಳು ಮರುಕಳಿಸಿದಂತಿದೆ. ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ ನೀಡಬೇಕು' ಎಂದು ಕೇಂದ್ರ ಸರಕಾರದ ಮಾಜಿ ಕಾನೂನು ಸಚಿವ, ಲೋಕಪಾಲ ಕರಡು ಮಸೂದೆ ಸಮಿತಿ ಸದಸ್ಯ ಶಾಂತಿಭೂಷಣ್ ಪ್ರತಿಕ್ರಿಯಿಸಿದ್ದಾರೆ. ಸ್ವಾಮಿ ಅಗ್ನಿವೇಶ್ ಅವರೂ ಇದಕ್ಕೆ ದನಿಗೂಡಿಸಿದ್ದಾರೆ.











Click it and Unblock the Notifications