ಸಚಿವೆ ಶೋಭಾ ಕರಂದ್ಲಾಜೆಗೆ 'ಲಂಚ': ಪತ್ರಕರ್ತರ ಸೆರೆ

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ 1.7 ಕೋಟಿ ರೂ. ಹಣ ನೀಡಬೇಕಿದೆ ಎಂದು ಹೇಳಿ ವಿದ್ಯುತ್ ಉತ್ಪಾದನಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಬಳಿ ಹಣಕ್ಕಾಗಿ ಇವರು ಒತ್ತಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿವರ ಹೆಸರು ಹೇಳಿಕೊಂಡು ಹಣಕ್ಕಾಗಿ ಒತ್ತಾಯಿಸಿದವರ ವಿರುದ್ಧ ವಿದ್ಯುತ್ ಉತ್ಪಾದನಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಒಂದು ವಾರದ ಹಿಂದೆ ನೇರವಾಗಿ ಸಚಿವೆ ಶೋಭಾ ಅವರನ್ನೇ ಭೇಟಿಯಾಗಿ ಅಲವತ್ತುಕೊಂಡಿದ್ದರು. ಇಂಧನ ಸಚಿವಾಲಯದ ಅಧಿಕಾರಿಗಳು ಪ್ರಕರಣವನ್ನು ವಿಧಾನಸೌಧ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.
ಆ ನಂತರ ಪ್ರಕರಣವನ್ನು ಕಬ್ಬನ್‌ಪಾರ್ಕ್‌ಗೆ ವರ್ಗಾವಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಐವರನ್ನು ವಿಚಾರಣೆ ನಡೆಸಲಾಯಿತು. ಪೊಲೀಸರು ವಿಚಾರಣೆಗೊಳಪಡಿಸಿದವರಲ್ಲಿ ಹೈದರಾಬಾದ್ ಮೂಲದ ನರಸಿಂಹ ಚೌದರಿ ಮತ್ತು ಬೆಂಗಳೂರಿನ ಮೋಹನ್ ಎಂಬುವರಲ್ಲದೆ ಖಾಸಗಿ ವಾಹಿನಿಯ ಮ್ಯಾನೇಜರ್ ಹಾಗೂ ಇಬ್ಬರು ಪತ್ರಕರ್ತರು ಸೇರಿದ್ದಾರೆ.












Click it and Unblock the Notifications