ಕರುಣಾನಿಧಿ 88ನೇ ವಸಂತಕ್ಕೆ; ಸಂಭ್ರಮಾಚರಣೆ ಮಾಯ
ಚೆನ್ನೈ,
ಜೂನ್ 3: ವೈಯಕ್ತಿಕವಾಗಿ, ರಾಜಕೀಯವಾಗಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಡಿಎಂಕೆ ಪರಮೋಚ್ಚ ನಾಯಕ ಎಂ. ಕರುಣಾನಿಧಿ ಶುಕ್ರವಾರ 88ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. id="toptextpromo">ತಮಿಳುನಾಡು
ವಿಧಾನಸಭೆ ಚುನಾವಣೆ ಸೋಲು, ಪುತ್ರಿ ಕನಿಮೋಳಿ, ಪಕ್ಷದ ಮುಖಂಡ ಎ. ರಾಜಾ 2ಜಿ ಹಗರಣದ ಹಿನ್ನೆಲೆಯಲ್ಲಿ ಜೈಲುಪಾಲಾಗಿರುವುದು, ಮತ್ತೊಬ್ಬ ನೆಂಟ ದಯಾನಿಧಿ ಮಾರನ್ ಮೇಲೆ ಸಿಬಿಐ ತೂಗುಕತ್ತಿ ತೂಗುತ್ತಿರುವುದರಿಂದ ಕರುಣಾನಿಧಿ ಮಂಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಅಷ್ಟೊಂದು ಕಳೆಕಟ್ಟಿಲ್ಲ. id='are-slot-1' class='oiad oi-axt oiadv'> id='top-searched-articles'>ಆದರೂ
ಪಕ್ಷದ ಕಾರ್ಯಕರ್ತರು ಒಂದಷ್ಟು ಉತ್ಸಾಹ ತೋರಿದ್ದಾರೆ. ರಾಜ್ಯದ ಮೂಲೆಮೂಲೆಯಲ್ಲೂ ಕರುಣಾ ಹುಟ್ಟುಹಬ್ಬ ಆಚರಿಸುವಂತೆ ಕಾರ್ಯಕರ್ತರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳಗನ್ ಕಳೆದ ವಾರವೇ ಕರೆ ಕೊಟ್ಟಿದ್ದಾರೆ.











Click it and Unblock the Notifications