ಹಣದಾಸೆಗಾಗಿ ಸಹಾಯಕಿ ಹತ್ಯೆಗೆ ಯತ್ನ: ಶಿಕ್ಷಕರ ಸೆರೆ
ಸೊರಬ,
ಜೂನ್ 2: ಹಣದಾಸೆಗಾಗಿ ಶಾಲೆ ಅಡುಗೆ ಸಹಾಯಕಿ ಪುಣ್ಯವತಿ ಎಂಬಾಕೆ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿ ಪ್ರಾಣ ಹೋಗಿರಬಹುದು ಎಂದು ಭಾವಿಸಿ ಪೊದೆಯಲ್ಲಿ ಎಸೆದು ಹೋಗಿದ್ದ ಆರೋಪಿಗಳಾದ ಶಿಕ್ಷಕ ನೀಲಪ್ಪ ಹಾಗೂ ರಾಮಪ್ಪ ಎಂಬುವವರನ್ನು ತಾಲೂಕಿನ ಚಿಮಣೂರು ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. id="toptextpromo">ಗಂಡನನ್ನು
ಕಳೆದುಕೊಂಡ ಪುಣ್ಯವತಿಗೆ ಜೀವನಾಂಶಕ್ಕಾಗಿ ಒಂದು ಲಕ್ಷ ಕೊಡಲಾಗಿತ್ತು. ಇದೇ ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕ ನೀಲಪ್ಪ ಪರಿಚಯವಾದ ನಂತರ ಒಂದು ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದಿದ್ದ. ಅನಾರೋಗ್ಯಪೀಡಿತ ಪುಣ್ಯವತಿಯನ್ನು ಶಿಕಾರಿಪುರ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಸ್ನೇಹಿತ ರಾಮಪ್ಪ ಗುಡ್ಡೆಕೊಪ್ಪ ಎಂಬಾತನೊಂದಿಗೆ ಸೇರಿ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆ ಮಾಡಲಾಯಿತು. id='are-slot-1' class='oiad oi-axt oiadv'> id='top-searched-articles'>ಕೊಲೆ
ಯತ್ನ ವೇಳೆ ಪ್ರಜ್ಞಾಹೀನಳಾದ ಪುಣ್ಯವತಿಯನ್ನು ಪೊದೆಗೆ ಎಸೆದು ಪರಾರಿಯಾಗಿದ್ದರು. ಪ್ರಜ್ಞೆ ಬಂದ ನಂತರ ಗದ್ದೇಮನೆ ನಿರ್ವಾಣಪ್ಪ ಎಂಬುವರಿಗೆ ನಡೆದ ಘಟನೆ ತಿಳಿಸಿದ ಪುಣ್ಯವತಿ, ತನ್ನ ಸಹೋದರ ಹನುಮಂತಪ್ಪನ ಮೂಲಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಕೊಲೆ ಯತ್ನ ಕುರಿತು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications