ಸುಪಾರಿ ಹಂತಕರೊಂದಿಗೆ ಶಾಮೀಲಾದ ಪೊಲೀಸ್ ಬಂಧನ

Rajkumar Vajantri, Yadagiri
ಯಾದಗಿರಿ, ಜೂ. 2 : ಸುಪಾರಿ ಹಂತಕರಿಗೆ ಸಹಕಾರ ನೀಡಿದ ಆರೋಪದ ಮೇಲೆ ಯಾದಗಿರಿ ಜಿಲ್ಲೆಯ ಶಹಾಪುರ ಗ್ರಾಮಂತರ (ಭೀಮರಾಯನಗುಡಿ) ಪೊಲೀಸ್ ಅಧಿಕಾರಿ ರಾಜಕುಮಾರ ವಾಜಂತ್ರಿಯವರನ್ನು ಗುಲ್ಬರ್ಗ ಪೊಲೀಸರು ಬಂಧಿಸಿದ್ದಾರೆ.

ಮೂವತೈದಕ್ಕೂ ಅಧಿಕ ಕೊಲೆ ಪ್ರಕರಣಗಳನ್ನು ಎದುರಿಸುತ್ತಿರುವ ಕುಖ್ಯಾತ ರೌಡಿ ಬೆತ್ತಲಕೇರಿ ಎಂಬವರು ಶ್ರೀನಿವಾಸ ಎಂಬಾತನ ಕೊಲೆಗೆ ರೂಪಿಸಲಾಗಿದ್ದ ಸಂಚಿನಲ್ಲಿ ರಾಜಕುಮಾರ ವಾಜಂತ್ರಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈಶಾನ್ಯ ವಲಯ ಐಜಿಪಿ ಕೆ.ವಿ.ಗಗನದೀಪ್ ಅವರ ಆದೇಶದಂತೆ ಯಾದಗಿರಿ ಎಸ್.ಪಿ ಡಿ.ರೂಪಾ ಮೌದ್ಗಿಲ್ ಅವರು ಆರೋಪಿತ ವಾಜಂತ್ರಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬಂಧಿನಕ್ಕೆ ಕಾರಣ : ಶ್ರೀನಿವಾಸನನ್ನು ಮುಗಿಸಲು ಬೆಂಗಳೂರಿನಿಂದ ಬಂದಿದ್ದ ಸುಪಾರಿ ಹಂತಕರೊಂದಿಗೆ ವಾಜಂತ್ರಿ ಶಾಮೀಲಾಗಿದ್ದರು. ಅವರಲ್ಲಿದ್ದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಿಲ್ಲ ಮತ್ತು ಅವರನ್ನು ಬಂಧಿಸಲಿಲ್ಲ. ಬದಲಾಗಿ ಅವರಿಗೆ ಸಾಥ್ ಕೊಟ್ಟು ಅವರಿಂದ 16 ಲಕ್ಷ ರುಪಾಯಿ ಪಡೆದಿದ್ದರು ಎಂದು ಆರೋಪ ಹೊರಿಸಲಾಗಿದೆ. ಅವರ ಮೇಲೆ ಗುಲ್ಬರ್ಗಾ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇವೆ : 2008 ನವೆಂಬರ್ 15ರಿಂದ ಶಹಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ವಾಜಂತ್ರಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ಶಹಾಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಂಟು ತಿಂಗಳು, ಸುರಪುರ ತಾಲ್ಲೂಕಿನ ಕೆಂಭಾವಿ ಠಾಣೆಯಲ್ಲಿ ಒಂದು ವರ್ಷ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆಲಸ ನಿರ್ವಹಿಸಿದ್ದರು. ಅಲ್ಲದೆ ಗುಲ್ಬರ್ಗದಲ್ಲಿ ಲಾಟರಿ ಮತ್ತು ನಿಷೇಧ ದಳದಲ್ಲಿ ನಾಲ್ಕು ತಿಂಗಳು ಸೇವೆ ಸಲ್ಲಿಸಿದ್ದಾರೆ. ಶಹಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2 ವರ್ಷ 6 ತಿಂಗಳು ಸೇವೆ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+