ಕರ್ನಾಟಕದ ಕರಾವಳಿಗೆ ಕಾಲಿಟ್ಟ ಮುಂಗಾರು
ಮಂಗಳೂರು,
ಜೂ. 2 : ಕರಾವಳಿಗೆ ಮುಂಗಾರು ಗುರುವಾರ ಅಧಿಕೃತವಾಗಿ ಕಾಲಿಟ್ಟಿತು. ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿತ್ತಾದರೂ ಮಂಗಳೂರು ತಾಲೂಕಿನಲ್ಲಿ ಮಾತ್ರ ಸುಡುಬಿಸಿಲಿತ್ತು. ಗುರುವಾರ ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾದ ತುಂತುರು ಮಳೆ ಬಿಸಿಲಿನ ಝಳವನ್ನು ತಗ್ಗಿಸಿತು. id="toptextpromo">ಕಾದ
ಕಾವಲಿಯಂತಾಗಿದ್ದ ನೆಲ ಮೊದಲ ಮಳೆಯ ಸಿಂಚನಕ್ಕೆ ಮೈಯೊಡ್ಡಿಕೊಂಡಿತು. ಮರಗಿಡಗಳು ಮುಂಗಾರು ಮುಸಲಧಾರೆಗೆ ಮುದಗೊಂಡವು. ಗುರುವಾರ ಮನೆಯಿಂದ ಶಾಲೆಗೆ ಹೊರಟ ಮಕ್ಕಳು, ಕೆಲಸಕ್ಕೆ ಹೊರಟವರು ಮಳೆಯ ಸೂಚನೆಯೇ ಇರದ ಕಾರಣ ಬರಿಗೈಯಲ್ಲಿ ತೆರಳಿ ಇದ್ದಕ್ಕಿದ್ದಂತೆಯೇ ಮಳೆ ಶುರುವಿಟ್ಟುಕೊಂಡ ಕಾರಣ ಒದ್ದೆಯಾಗಬೇಕಾಯಿತು. ಸುಡುಬಿಸಿಲಿಂದ ಕಂಗೆಟ್ಟಿದ್ದ ಕಾರಣ ಮೊದಲ ಮಳೆಗೆ ಒದ್ದೆಯಾಗುವುದರಲ್ಲೂ ಒಂಥರಾ ಖುಷಿಪಟ್ಟರು. id='are-slot-1' class='oiad oi-axt oiadv'> id='top-searched-articles'>ಮಳೆಯಿಂದಾಗಬಹುದಾದ
ಅನಾಹುತಗಳನ್ನು ಎದುರಿಸಲು ಮಂಗಳೂರು ಮಹಾನಗರ ಪಾಲಿಕೆ ಸಿದ್ದವಿರುವುದಾಗಿ ಮೇಯರ್ ಮತ್ತು ಆಯುಕ್ತರು ಬುಧವಾರ ಹೇಳಿದ್ದರು. ಜಿಲ್ಲಾಡಳಿತವೂ ಮುಂಗಾರು ಉಂಟುಮಾಡಬಹುದಾದ ಅನಾಹುತಗಳನ್ನು ಎದುರಿಸಲು ಸಕಲ ಸಿದ್ದತೆ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಗುರುವಾರ ತಿಳಿಸಿದರು. ಕಾದುನೋಡಬೇಕು ಮುಂಗಾರು ಮಾಡಬಹುದಾದ ಅವಾಂತರಗಳೇನು? ಅವಾಂತರಗಳ ತಡೆಗೆ ಆಡಳಿತ ಯಂತ್ರದ ತಂತ್ರಗಳೇನೆಂದು.











Click it and Unblock the Notifications