ಮುಂಗಾರು ಮಳೆ ಎದುರಿಸಲು ಮಂಗಳೂರು ಸಜ್ಜು
ಮಂಗಳೂರು,
ಜೂ. 2 : ಬಂದರು ನಗರಿ ಮಂಗಳೂರು ಬರಲಿರುವ 'ಮುಂಗಾರು" ಎದುರಿಸಲು ಸಿದ್ದವಾಗಿದೆ, ದಿನದ 24 ಗಂಟೆಯೂ ಕಾರ್ಯಾಚರಣೆಗೆ ತಂಡಗಳನ್ನು ಅಣಿಗೊಳಿಸಲಾಗಿದೆ ಎಂದು ಮಂಗಳೂರು ಮೇಯರ್ ಪ್ರವೀಣ್ ಮತ್ತು ಆಯುಕ್ತರಾದ ಡಾ.ವಿಜಯ ಪ್ರಕಾಶ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. id="toptextpromo">ನಗರದ
60 ವಾರ್ಡ್‌ಗಳಲ್ಲೂ ತುರ್ತು ವಿಪತ್ತು ನಿರ್ವಹಣ ತಂಡಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ನಗರದ 60ಕ್ಕೂ ಹೆಚ್ಚು ದೊಡ್ಡ ಚರಂಡಿಗಳ ಹೂಳೆತ್ತಲಾಗಿದೆ. ಗೃಹರಕ್ಷಕ ದಳ, ಅಗ್ನಿಶಾಮಕ ದಳಗಳ ನೆರವು ಪಡೆದುಕೊಳ್ಳಲಾಗುತ್ತಿದೆ. ಪರಿಣತ ಈಜುಗಾರರು, ತುರ್ತು ಸಂದರ್ಭದಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ದೋಣಿಗಳನ್ನು ಸನ್ನದ್ದ ಸ್ಥಿತಿಯಲ್ಲಿಡಲಾಗಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಮಹಾನಗರ
ಪಾಲಿಕೆಯಲ್ಲಿ ದಿನದ 24 ಗಂಟೆಯೂ ಮಾಹಿತಿ ಘಟಕ ಕಾರ್ಯನಿರ್ವಹಿಸಲಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಪತ್ತು ನಿರ್ವಹಣ ತಂಡಗಳು ಕಾರ್ಯಾಚರಿಸಲಿವೆ ಎಂದರು.











Click it and Unblock the Notifications