ಮೊದಲ ದಿನ ಅಸೆಂಬ್ಲಿಗೆ ಹಾಜರಿ ಹಾಕಲು ಕಾಂಗ್ರೆಸ್ ನಿರ್ಧಾರ

siddaramaih
ಬೆಂಗಳೂರು, ಜೂನ್ 2: ಆಡಳಿತಾರೂಢ ಬಿಜೆಪಿ ಬಹುಮತ ಸಾಬೀತುಪಡಿಸಲು ಮುಂಗಾರು ಅಧಿವೇಶನದ ಮೊದಲ ದಿನ ನಿಲುವಳಿ ಸೂಚನೆ ಮಂಡಿಸಲಿದೆ. ಇದನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಶಾಸಕಾಂಗ ಪಕ್ಷವು ಇಂದಿನ ಸಭೆಯಲ್ಲಿ ಪಾಳ್ಗೊಳ್ಳಲು ತೀರ್ಮಾನಿಸಿದೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಈ ನಿರ್ಧಾರ ತೆಗೆದುಕೊಂಡಿದೆ. ಸಭೆಯಲ್ಲಿ ಪಕ್ಷದ ಎಲ್ಲ ಸದಸ್ಯರೂ ಹಾಜರಿದ್ದರು. ಆದರೆ ಉಳಿದ 10 ದಿನಗಳ ಕಾಲ ಅಧಿವೇಶನದಲ್ಲಿ ಪಾಳ್ಗೊಳ್ಳುವ ಬಗ್ಗೆ ನಾಳೆ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಈ ಮಧ್ಯೆ, ಜೆಡಿಎಸ್ ಪಕ್ಷವು ಅಧಿವೇಶನದಲ್ಲಿ ಪಾಲ್ಗೊಳ್ಳದಿರಲು ಈ ಹಿಂದೆಯೇ ಒಮ್ಮತ ತೀರ್ಮಾನ ತೆಗೆದುಕೊಂಡಿದೆ. ಕಾಂಗ್ರೆಸ್ ಇಂದು ತೆಗೆದುಕೊಂಡಿರುವ ನಿರ್ಧಾರವನ್ನು ನೋಡಿ ತಾವೇನೂ ನಿರ್ಧಾರ ಬದಲಿಸುವುದಿಲ್ಲ ಎಂದು ಪಕ್ಷದ ವಕ್ತಾರ ವೈಎಸ್ ವಿ ದತ್ತಾ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಬಲ ಪ್ರಸ್ತುತ 224 ರಷ್ಟಿದೆ. ಇದರಲ್ಲಿ ಆಡಳಿತಾರೂಢ ಬಿಜೆಪಿ 119, ಕಾಂಗ್ರೆಸ್ 71, ಜೆಡಿಎಸ್ 26, ಸ್ವತಂತ್ರರು 6, ಸ್ಪೀಕರ್ 1, ನಾಮಕರಣ ಸದಸ್ಯರು 1 ಮತ್ತು ಖಾಲಿ ಸ್ಥಾನ 1 ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+